ಗ್ಯಾಸ್ ಸಿಲಿಂಡರ್ ಅಭಾವ ಬಗ್ಗೆ ಭಕ್ತರಿಗೆ ಸಿದ್ಧಗಂಗಾಶ್ರೀ ಮಹತ್ವದ ಕರೆ

Edited By:

Updated on: Mar 29, 2026 | 10:28 PM

ಸಿಲಿಂಡರ್ ಅಭಾವದ ಕುರಿತು ಪ್ರತಿಕ್ರಿಯಿಸಿದ ಸಿದ್ದಲಿಂಗ ಮಹಾಸ್ವಾಮೀಜಿ, ಸಂಪನ್ಮೂಲಗಳ ಮಿತ ಬಳಕೆ ಮತ್ತು ಪರ್ಯಾಯಗಳ ಅವಶ್ಯಕತೆಯನ್ನು ಒತ್ತಿ ಹೇಳಿದರು. ಮಠದಲ್ಲಿ ಸೌದೆ, ಉಬ್ಬುಲ ಮತ್ತು ಅಡಿಕೆ ಸಿಪ್ಪೆಯನ್ನು ಇಂಧನವಾಗಿ ಬಳಸುವ ಪದ್ಧತಿ ಬಗ್ಗೆ ತಿಳಿಸಿದರು. ಸಂಪನ್ಮೂಲಗಳನ್ನು ಸಮರ್ಥವಾಗಿ ನಿರ್ವಹಿಸುವ ಸಂದೇಶ ನೀಡಿದರು.

ತುಮಕೂರು, ಮಾರ್ಚ್​ 29: ನಿಮ್ಮ ಬಳಿಯಿರುವ ಗ್ಯಾಸ್​ನ್ನು ವ್ಯರ್ಥ ಮಾಡಬೇಡಿ, 5 ಬಾರಿ ಚಿಂತಿಸಿ ಬಳಸಿ ಎಂದು ಸಿದ್ದಲಿಂಗಶ್ರೀ ಮನವಿ ಮಾಡಿದರು. ನಗರದ ಸಿದ್ಧಗಂಗಾ ಮಠದಲ್ಲಿ ನಡೆದ ಸುದ್ದಿಗೋಷ್ಠಿ ಮಾತನಾಡಿದ ಅವರು, ವಿದ್ಯುತ್, ನೀರು, ಎಲ್​ಪಿಜಿ, ತೈಲ ಅತ್ಯಂತ ಅಮೂಲ್ಯವಾದುದು. ನಮಗೆ ಸಿಕ್ಕಿದ್ದು ಮತ್ತೊಬ್ಬರಿಗೂ ಸಿಗಲಿ ಎಂದು ಉದಾರತೆ ಇರಲಿ. ಪ್ರತಿಯೊಂದು ವಸ್ತು ಬಳಸುವಾಗ 5 ಬಾರಿ ಯೋಚಿಸಿ ಬಳಸಿ. ನಮ್ಮ ಬಳಿ ಅಧಿಕವಾಗಿದ್ದರೂ ಮುಂದಿನ ದಿನಗಳಲ್ಲಿ ಕೊರತೆಯಾಗಬಹುದು. ಸಿದ್ಧಗಂಗಾ ಮಠದಲ್ಲಿ ಸೌದೆ, ಅಡಕೆ ಸಿಪ್ಪೆಯನ್ನು ಇಂಧನವಾಗಿ ಬಳಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಗೋಬರ್ ಗ್ಯಾಸ್ ಘಟಕ ಅಳವಡಿಸುವ ಚಿಂತನೆಯಿದೆ. ಯುದ್ಧದಂತಹ ಅನಿಶ್ಚಿತ ಪರಿಸ್ಥಿತಿಯಲ್ಲಿ ಲಭ್ಯವಿರುವ ಸಂಪನ್ಮೂಲ ಮಿತವಾಗಿ ಬಳಸುವ ಮೂಲಕ ಸಂಕಷ್ಟ ಎದುರಿಸಲು ನಾವೆಲ್ಲರೂ ಸಿದ್ಧರಿರಬೇಕು ಎಂದಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Loading...
Unable to load recommendations.
Follow Us
ಜಗದೀಶ ಬಿ.

ಜಗದೀಶ್​ ಬಸವರಾಜು ಟಿವಿ9 ಕನ್ನಡದ ಜಿಲ್ಲಾ ವರದಿಗಾರರಾಗಿದ್ದಾರೆ. ಪ್ರಸ್ತುತ ಅವರು ತುಮಕುರು ಜಿಲ್ಲಾ ಸುದ್ದಿಗಳ ವರದಿ ಮಾಡುತ್ತಿದ್ದಾರೆ. ಹುಟ್ಟಿದ್ದು, ಬೆಳೆದಿದ್ದು ಬೆಂಗಳೂರಿನಲ್ಲಿ. ಪತ್ರಿಕೋದ್ಯಮ ಓದಿದ್ದು, ವೃತ್ತಿ ಬದುಕು ಆರಂಭಿಸಿದ್ದು ಕೂಡಾ ಬೆಂಗಳೂರಿನಲ್ಲಿ. ಟಿವಿ9ನಲ್ಲಿ ಎಂಟು ವರ್ಷ ಸಹಿತ ಹತ್ತು ವರ್ಷದ ಕ್ರೈಂ ವರದಿಗಾರಿಕೆಯ ಅನುಭವದ ಜೊತೆ ಸದ್ಯ ೨೦೨೫ರಿಂದ ತುಮಕೂರು ಜಿಲ್ಲಾವರದಿಗಾರನಾಗಿ ಮಾದ್ಯಮದ ವೃತ್ತಿ ಬದುಕು ಮುಂದುವರೆದಿದೆ.

Read More