Video: 6 ದಶಕಗಳ ಕಾಲ ಭಾರತವನ್ನು ಶತ್ರುಗಳಿಂದ ರಕ್ಷಿಸಿ ಹೊರಟ ಮಿಗ್-21ಗೆ ಭಾವಪೂರ್ಣ ವಿದಾಯ
ಅರವತ್ಮೂರು ವರ್ಷಗಳ ಕಾಲ ರಕ್ಷಣಾ ಗುರಾಣಿಯಂತೆ ಶತ್ರುಗಳಿಂದ ಭಾರತವನ್ನು ರಕ್ಷಿಸಿದ್ದ ಮಿಗ್-21 ಯುದ್ಧ ವಿಮಾನ ತನ್ನ ಕೆಲಸವನ್ನು ಮುಗಿಸಿ ನಿವೃತ್ತಿ ಪಡೆದಿದೆ. ಇಂದು ಚಂಡೀಗಢದಲ್ಲಿ ಅಂತಿಮ ಹಾರಾಟ ನಡೆಸಿತು. ಸೇನೆಯಿಂದ ವಾಟರ್ ಗನ್ ಸಲ್ಯೂಟ್ನ ವಿಡಿಯೋ ಇಲ್ಲಿದೆ. ಭಾರತದ ಜನತೆ ಹಾಗೂ ವಾಯುಪಡೆಗೆ ಇದು ಭಾವನಾತ್ಮಕ ಕ್ಷಣ. 1950 ರ ದಶಕದಲ್ಲಿ ಸೋವಿಯತ್ ಒಕ್ಕೂಟವು ವಿನ್ಯಾಸಗೊಳಿಸಿದ MiG-21 ಅನ್ನು 1963 ರಲ್ಲಿ ಭಾರತೀಯ ವಾಯುಪಡೆಗೆ ಸೇರಿಸಲಾಯಿತು.
ಚಂಡೀಗಢ, ಸೆಪ್ಟೆಂಬರ್ 26: ಅರವತ್ಮೂರು ವರ್ಷಗಳ ಕಾಲ ರಕ್ಷಣಾ ಗುರಾಣಿಯಂತೆ ಶತ್ರುಗಳಿಂದ ಭಾರತವನ್ನು ರಕ್ಷಿಸಿದ್ದ ಮಿಗ್-21 ಯುದ್ಧ ವಿಮಾನ ತನ್ನ ಕೆಲಸವನ್ನು ಮುಗಿಸಿ ನಿವೃತ್ತಿ ಪಡೆದಿದೆ. ಇಂದು ಚಂಡೀಗಢದಲ್ಲಿ ಅಂತಿಮ ಹಾರಾಟ ನಡೆಸಿತು. ಸೇನೆಯಿಂದ ವಾಟರ್ ಗನ್ ಸಲ್ಯೂಟ್ನ ವಿಡಿಯೋ ಇಲ್ಲಿದೆ. ಭಾರತದ ಜನತೆ ಹಾಗೂ ವಾಯುಪಡೆಗೆ ಇದು ಭಾವನಾತ್ಮಕ ಕ್ಷಣ. 1950 ರ ದಶಕದಲ್ಲಿ ಸೋವಿಯತ್ ಒಕ್ಕೂಟವು ವಿನ್ಯಾಸಗೊಳಿಸಿದ MiG-21 ಅನ್ನು 1963 ರಲ್ಲಿ ಭಾರತೀಯ ವಾಯುಪಡೆಗೆ ಸೇರಿಸಲಾಯಿತು.
ಭಾರತವು ಒಟ್ಟು 874 ವಿಮಾನಗಳನ್ನು ಸ್ವಾಧೀನಪಡಿಸಿಕೊಂಡಿತ್ತು. 1965 ಮತ್ತು 1971 ರ ಪಾಕಿಸ್ತಾನದ ವಿರುದ್ಧದ ಯುದ್ಧಗಳಿಂದ ಕಾರ್ಗಿಲ್ ಸಂಘರ್ಷದವರೆಗೆ, ಎಲ್ಲಾ ಹಂತದಲ್ಲೂ ಮಿಗ್-21 ಭಾರತದ ವಾಯುಪಡೆಗೆ ಬೆನ್ನೆಲುಬಾಗಿ ನಿಂತಿತ್ತು. ಇಂದು ಅದಕ್ಕೆ ಅಂತಿಮ ವಿದಾಯ ಹೇಳಲಾಯಿತು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿ ಹಲವು ಗಣ್ಯರು ಸ್ಥಳದಲ್ಲಿದ್ದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಬೆಳಗಾವಿ: ಸಿಗರೇಟ್ ಹಣ ಕೇಳಿದ್ದಕ್ಕೆ ಬಿತ್ತು ಪಾನ್ ಶಾಪ್ ಮಾಲೀಕನ ಹೆಣ
ಲವ್ ಹೆಸರಲ್ಲಿ ಮೋಸ ಮಾಡಿದವನ ಕಾಮುಕತೆ ಬಿಚ್ಚಿಟ್ಟ ಸಂತ್ರಸ್ತೆ
ಬಿಎಂಟಿಸಿ ಬಸ್ ಬಳಿಕ ವಿಕ್ಟೋರಿಯಾ ಆಸ್ಪತ್ರೆಯಲ್ಲೂ UPI ಸ್ಕ್ಯಾನರ್ ಸ್ಕ್ಯಾಮ್
ಲಕ್ಕುಂಡಿಯ ಜೈನ ಬಸದಿಗಳಲ್ಲೂ ನಿಧಿ ಇದ್ಯಾ? ಸರ್ಪಗಳು ಕಾವಲು ಕಾಯ್ತಿದ್ಯಾ?

