ಭೈರತಿ ಸುರೇಶ್ ಕಾರಿಗೆ ಎಸ್ಕಾರ್ಟ್ ವಾಹನ ಟಚ್: ಪೊಲೀಸರಿಗೆ ಬೈಯ್ದ ಸಚಿವ

| Updated By: ಗಂಗಾಧರ​ ಬ. ಸಾಬೋಜಿ

Updated on: Jan 21, 2025 | 3:16 PM

ಸುವರ್ಣಸೌಧದಿಂದ ಹೊರಡುವ ಸಮಯದಲ್ಲಿ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರ ಕಾರಿಗೆ ಎಸ್ಕಾರ್ಟ್ ವಾಹನ ಟಚ್​ ಆಗಿದ್ದು ಈ ಘಟನೆಯಿಂದ ಸಚಿವರು ಆಕ್ರೋಶಗೊಂಡಿದ್ದಾರೆ. ಚಾಲಕ ಮತ್ತು ಪೊಲೀಸರನ್ನು ಕಾರಿನಲ್ಲೇ ಕುಳಿತು ಬೈಯ್ದಿದ್ದಾರೆ. ಬೆಳಗಾವಿಯ ಸುವರ್ಣಸೌಧದ ಪಶ್ಚಿಮ ದ್ವಾರದ ಬಳಿ ಘಟನೆ ನಡೆದಿದೆ.

ಬೆಳಗಾವಿ, ಜನವರಿ 21: ಸಚಿವ ಭೈರತಿ ಸುರೇಶ್ (Byrathi Suresh) ಕಾರಿಗೆ ಎಸ್ಕಾರ್ಟ್ ವಾಹನ ಟಚ್ ಆದ ಘಟನೆ ಸುವರ್ಣಸೌಧದ ಪಶ್ಚಿಮ ಪ್ರವೇಶಧ್ವಾರದಲ್ಲಿ ನಡೆದಿದೆ. ಸಚಿವ ಭೈರತಿ ಸುರೇಶ್ ಸುವರ್ಣಸೌಧದಿಂದ ಹೊರಟ್ಟಿದ್ದಾಗ ಘಟನೆ ನಡೆದಿದೆ. ಈ ವೇಳೆ ಗಲಿಬಿಲಿಗೊಂಡ ಭೈರತಿ ಸುರೇಶ್​​, ಎಸ್ಕಾರ್ಟ್ ವಾಹನದ ಡ್ರೈವರ್ ಹಾಗೂ ಪೊಲೀಸರಿಗೆ ಕಾರಿನಲ್ಲೇ ಕುಳಿತು ಬೈಯ್ದರು. ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Published on: Jan 21, 2025 03:10 PM