ಸಾಲ ಪಡೆದ ಮಹಿಳೆ ತನ್ನ ಗೋಳು ಹೇಳಿಕೊಂಡಾಗ ಕೂಡಲೇ ಸ್ಪಂದಿಸಿದ ಸಚಿವ ಆರ್ ಸುಧಾಕರ್

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Nov 19, 2022 | 4:01 PM

ಸಾಲ ಪಡೆದ ಮಹಿಳೆ ತಮ್ಮ ಗೋಳು ಹೇಳಿಕೊಳ್ಳಲು ಶನಿವಾರ ಚಿಕ್ಕಬಳ್ಳಾಪುರದಲ್ಲಿ ಸಚಿವ ಆರ್ ಸುಧಾಕರ್ ಅವರು ನಡೆಸುತ್ತಿದ್ದ ಜನತಾ ದರ್ಶನ ಕಾರ್ಯಕ್ರಮಕ್ಕೆ ಆಗಮಿಸಿ ಸಚಿವರೊಂದಿಗೆ ತಮ್ಮ ಕಷ್ಟ ಹೇಳಿಕೊಂಡಿದ್ದಾರೆ.

ಚಿಕ್ಕಬಳ್ಳಾಪುರ: ಬಡ್ಡಿಗೆ ಹಣ ಸಾಲ ತೆಗೆದುಕೊಂಡವರ ಸ್ಥಿತಿಯನ್ನು ಸಾಲಗಾರರು ಹೇಗೆ ನರಕವಾಗಿಸುತ್ತಾರೆ ಅನ್ನೋದಿಕ್ಕೆ ಚಿಕ್ಕಬಳ್ಳಾಪುರದ ಈ ಮಹಿಳೆಯೇ ಸಾಕ್ಷಿ. ಇವರು, ಮಮತಾ (Mamata) ಹೆಸರಿನ ಮಹಿಳೆ ಹತ್ತಿರ ಶೇಕಡ 5ರ ಬಡ್ಡಿಯಂತೆ 2 ಲಕ್ಷ ರೂ. ಸಾಲ (hand loan) ತೆಗೆದುಕೊಂಡು ಅದರಲ್ಲಿ ರೂ.1 ಲಕ್ಷ ಹಿಂತಿರುಗಿಸಿದ್ದಾರೆ ಮತ್ತು ಇನ್ನೊಂದು ಲಕ್ಷ ಕೊಡುವುದು ಬಾಕಿಯಿದೆ. ಆದರೆ, ಮಮತಾ ಇನ್ನೂ ರೂ. 4.80 ಲಕ್ಷ ಕೊಡಬೇಕು ಅಂತ ಕಾಡಿಸಿ, ಪೀಡಿಸಿ, ಕಿರುಕುಳ ನೀಡಿ ಪೊಲೀಸ್ ಠಾಣೆಯಲ್ಲೂ ದೂರು ಸಲ್ಲಿಸಿದ್ದಾರಂತೆ. ಸಾಲ ಪಡೆದ ಮಹಿಳೆ ತಮ್ಮ ಗೋಳು ಹೇಳಿಕೊಳ್ಳಲು ಶನಿವಾರ ಚಿಕ್ಕಬಳ್ಳಾಪುರದಲ್ಲಿ ಸಚಿವ ಆರ್ ಸುಧಾಕರ್ (Dr R Sudhakar) ಅವರು ನಡೆಸುತ್ತಿದ್ದ ಜನತಾ ದರ್ಶನ ಕಾರ್ಯಕ್ರಮಕ್ಕೆ ಆಗಮಿಸಿ ಸಚಿವರೊಂದಿಗೆ ತಮ್ಮ ಕಷ್ಟ ಹೇಳಿಕೊಂಡಿದ್ದಾರೆ. ಸಚಿವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ ಎಲ್ ನಾಗೇಶ್ (DL Nagesh) ಅವರಿಗೆ ಕೂಡಲೇ ಕ್ರಮ ಜರುಗಿಸುವಂತೆ ಸೂಚನೆ ನೀಡಿದ್ದಾರೆ.