Yuva Brigade; ವೇಣುಗೋಪಾಲ್ ಕೊಲೆಯಲ್ಲಿ ಸಚಿವ ಮಹಾದೇವಪ್ಪ ಪುತ್ರ ಸುನಿಲ್ ಬೋಸ್ ಸಹಚರರು ಭಾಗಿಯಾಗಿದ್ದಾರೆ: ಚಕ್ರವರ್ತಿ ಸೂಲಿಬೆಲೆ

|

Updated on: Jul 11, 2023 | 4:57 PM

ಅಪರಾಧಗಳು ನಡೆದಾಗ ಸರ್ಕಾರ ಯಾರ ಪರವೂ ನಿಂತುಕೊಳ್ಳುವುದಿಲ್ಲ ಅಂತ ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದಂತಾಗುತ್ತದೆ ಎದು ಸೂಲಿಬೆಲೆ ಹೇಳಿದರು.

ಬೆಂಗಳೂರು: ಯುವ ಬ್ರಿಗೇಡ್ ಸಂಘಟನೆಯ ಟಿ ನರಸೀಪುರ ತಾಲ್ಲೂk ಸಂಚಾಲಕರಾಗಿದ್ದ ಯುವಕ ವೇಣುಗೋಪಾಲ್ (Venugopal) ಬರ್ಬರ ಹತ್ಯೆಗೆ ಪುನೀತ್ ರಾಜಕುಮಾರ್ (Puneet Rajkumar) ಅವರ ಫೋಟೋ ಸರಿಸಿದ್ದು ಕೇವಲ ನೆಪಮಾತ್ರ; ಆದರೆ ಕೊಲೆ ಬೇರೆ ಕಾರಣಗಳಿಗೋಸ್ಕರ ಆಗಿದೆ ಎಂದು ಸಂಘಟನೆಯ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ (Chakravarti Sulibele) ಹೇಳಿದರು. ನಗರದಲ್ಲಿಂದು ಟಿವಿ9 ಕನ್ನಡ ವಾಹಿನಿ ವರದಿಗಾರನೊಂದಿಗೆ ಮಾತಾಡಿದ ಸೂಲಿಬೆಲೆ, ವೇಣುಗೋಪಾಲ್ ಒಬ್ಬ ದಲಿತ ಯುವಕನಾಗಿದ್ದರೂ ಅಪಾರವಾಗಿ ಬೆಳೆದಿದ್ದ ಮತ್ತು ತಾಲ್ಲೂಕಿನಲ್ಲಿ ಅವನ ಜನಪ್ರಿಯತೆ ದಿನೇದಿನೆ ಹೆಚ್ಚತೊಡಗಿತ್ತು. ಅದಲ್ಲದೆ, ಕೆಲ ಪಟ್ಟಭದ್ರ ಹಿತಾಸಕ್ತಿಗಳಿಗೆ ವೇಣುಗೋಪಾಲ್ ಹನುಮ ಜಯಂತಿ ಆಚರಿಸುವುದು ಬೇಡವಾಗಿತ್ತು. ಅವನ ಕೊಲೆಗೆ ಇವೇ ಪ್ರಮುಖ ಕಾರಣಗಳು ಎಂದು ಸೂಲಿಬೆಲೆ ಹೇಳಿದರು. ಅವನನ್ನು ಕೊಲೆ ಮಾಡಿದವರಲ್ಲಿ ಸಚಿವ ಹೆಚ್ ಸಿ ಮಹಾದೇವಪ್ಪ (HC Mahadevappa) ಅವರ ಪುತ್ರ ಸುನೀಲ್ ಬೋಸ್ (Sunil Bose) ಸಹಚರರಿದ್ದಾರೆ, ಸುನೀಲ್ ಕೊಲೆಯಲ್ಲಿ ಭಾಗಿಯಾಗಿದ್ದಾರೆ ಅಂತ ಹೇಳುತ್ತಿಲ್ಲ, ಆದರೆ ತನಿಖೆ ಪೂರ್ಣಗೊಳ್ಳುವವರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವ ಮಹಾದೇವಪ್ಪರನ್ನು ಸಂಪುಟದಿಂದ ಹೊರಗಿಟ್ಟರೆ ಅವರು ಸಮಾಜಕ್ಕೆ ಒಂದು ಸಂದೇಶ ನೀಡಿದಂತಾಗುತ್ತದೆ, ಅಪರಾಧಗಳು ನಡೆದಾಗ ಸರ್ಕಾರ ಯಾರ ಪರವೂ ನಿಂತುಕೊಳ್ಳುವುದಿಲ್ಲ ಅಂತ ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದಂತಾಗುತ್ತದೆ ಎದು ಸೂಲಿಬೆಲೆ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

Follow us on