ಬೆಂಗಳೂರಿನ ದಕ್ಷಿಣ ತಾಲೂಕು ಕಚೇರಿ ವರ್ಲ್ಡ್​ ಫೇಮಸ್ ಆಗಿದೆ ಅಂತ ಗೇಲಿ ಮಾಡಿದ ಸಚಿವ ಕೃಷ್ಣ ಭೈರೇಗೌಡ

ಅರುಣ್​ ಕುಮಾರ್​ ಬೆಳ್ಳಿ

Updated on: Jun 19, 2025 | 3:45 PM

ಇದೇ ಕಚೇರಿಯಲ್ಲಿ ಅಸಿಸ್ಟಂಟ್ ಕಮೀಶನರ್ ಕೂಡ ಇರುತ್ತಾರೆ, ಸಚಿವರು ಕಚೇರಿಗೂ ಬಂದರೂ ಮೇಡಂ ನಾಪತ್ತೆ. ಇನ್ನು ಆವರು ಜನಸಾಮಾನ್ಯರ ಕೈಗೆ ಹೇಗೆ ಸಿಕ್ಕಾರು ಎಂದು ಸಚಿವ ಭೈರೇಗೌಡ ಪ್ರಶ್ನಿಸುತ್ತಾರೆ. ಅವರನ್ನು ಭೇಟಿ ಮಾಡೋದು ಹೇಗೆ ಅಂತ ಕೇಳಿದರೆ ಪಾಂಡುರಂಗ, ಮೊದಲ ಸಚಿವರೊಂದಿಗೆ ಮಾತಾಡಿದ್ದ ಅಶ್ವಿನಿ ಎನ್ನುವವರನ್ನು ಕರೆಸುತ್ತಾರೆ. ಅವರು ಪುನಃ ಬಂದು ಏನೇನೋ ಸಮಜಾಯಿಷಿಗಳನ್ನು ನೀಡುತ್ತಾರೆ.

ಬೆಂಗಳೂರು, ಜೂನ್ 19: ಬೆಂಗಳೂರು ದಕ್ಷಿಣ ತಾಲೂಕು ಆಫೀಸಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅನಿರೀಕ್ಷಿತ ಭೇಟಿ ನೀಡಿ ಅಲ್ಲಿದ್ದ ಅಧಿಕಾರಿಗಳಿಗೆ ಜನ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಕೇಳಿದರೆ ಕಕ್ಕಾಬಿಕ್ಕಿ! ಸಚಿವರ ಪ್ರಶ್ನೆಗಳಿಗೆ ಅವರಲ್ಲಿ ಉತ್ತರವಿಲ್ಲ. ಕೊಂಚ ಧಢೂತಿ ಎನಿಸುವ ವ್ಯಕ್ತಿಯೊಬ್ಬರು ಈ ಕಚೇರಿಯಲ್ಲಿ ಗ್ರೇಡ್ 2 ತಹಸೀಲ್ದಾರ್ ಆಗಿ ಕೆಲಸ ಮಾಡುತ್ತಿದ್ದರೂ ಮತ್ತು ಆಡಳಿತಾಧಿಕಾರಿಯಾಗಿದ್ದರರೂ ಕಚೇರಿಯ ಆಗುಹೋಗುಗಳ ಬಗ್ಗೆ ಅವರಿಗೇನೂ ಗೊತ್ತಿಲ್ಲ. ಪಾಂಡುರಂಗ ಹೆಸರಿನ ಅಧಿಕಾರಿಯು ಮೊದಲು ಪಕ್ಕದ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರಂತೆ, ಈಗ ಇಲ್ಲಿಗೆ ವರ್ಗವಾಗಿ ಬಂದಿದ್ದಾರೆ. ನೀವೆಲ್ಲ ಸೇರಿ ಕಚೇರಿಯನ್ನು ವಿಶ್ವಪ್ರಸಿದ್ಧ ಮಾಡಿದ್ದೀರಿ ಎಂದು ಸಚಿವ ಕೃಷ್ಣ ಭೈರೇಗೌಡ ಕುಹಕವಾಡುತ್ತಾರೆ.

ಇದನ್ನೂ ಓದಿ:  ಕಾಂಗ್ರೆಸ್​​ನಲ್ಲಿ ಒಕ್ಕಲಿಗರು ಮುಖ್ಯಮಂತ್ರಿಯಾಗ್ತಾರೆ: ಹೊಸ ಬಾಂಬ್ ಸಿಡಿಸಿದ ಸಚಿವ ಕೃಷ್ಣ ಬೈರೇಗೌಡ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.