First timer displays maturity: ಅಧಿಕಾರಿಗಳಿಂದ ಆಗಿರಬಹುದಾದ ಪ್ರಮಾದವನ್ನು ಅಂಗೀಕರಿಸಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್!

|

Updated on: Jul 05, 2023 | 2:13 PM

ಸಚಿವರು ತಮ್ಮ ಅಧಿಕಾರಗಳಿಂದ ಆದ ತಪ್ಪುಗಳನ್ನು ಸಾಮಾನ್ಯವಾಗಿ ಒಪ್ಪಿಕೊಳ್ಳುವುದಿಲ್ಲ. ಆದರೆ ಲಕ್ಷ್ಮಿ ಹೆಬ್ಬಾಳ್ಕರ್ ಸ್ವಲ್ಪ ಡಿಫರೆಂಟ್ ಎನಿಸಿದರು.

ಬೆಂಗಳೂರು: ಮೊದಲ ಬಾರಿಗೆ ಸಚಿವೆಯಾದರೂ, ಸದನದಲ್ಲಿ ಸದಸ್ಯರೊಬ್ಬರು ಕೇಳಿದ ಪ್ರಶ್ನೆಗೆ ಸಮಂಜಸ ಉತ್ತರ ನೀಡಿ ಮಹಿಳೆ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಉಳಿದ ಸದಸ್ಯರ ಗಮನ ಸೆಳೆದರು. ಶಾಸಕರೊಬ್ಬರು ತಮ್ಮ ಕ್ಷೇತ್ರದಲ್ಲಿ ಅಂಗನವಾಡಿ ಕೇಂದ್ರಗಳ (Anganwadi centres) ಸ್ಥಿತಿಗತಿಯನ್ನು ವಿವರಿಸಿ ಸಚಿವರು ಕಾಯಕಲ್ಪ ಕಲ್ಪಿಸಬೇಕು ಅಂತ ಹೇಳಿದ್ದಾರೆ. ಕ್ಷೇತ್ರದಲ್ಲಿ ಶಿಥಿಲಾವಸ್ಥೆಯಲ್ಲಿರುವ ಕೇಂದ್ರಗಳ (fragile centres) ಬಗ್ಗೆಯೂ ಸಚಿವೆ ಗಮನ ಸೆಳೆದು ಆಧಿಕಾರಿಗಳು ತಪ್ಪು ಮಾಹಿತಿ ನೀಡಿರುವುದನ್ನು ಸದಸ್ಯ ಹೇಳಿದ್ದಾರೆ. ಅವರ ಎಲ್ಲ ಪ್ರಶ್ಮೆಗಳಿಗೆ ನಿರಾತಂಕದಿಂದ ಉತ್ತರಿಸಿದ ಲಕ್ಷ್ಮಿ ಹೆಬ್ಬಾಳ್ಕರ್, ಅಧಿಕಾರಿಗಳಿಂದ ಆಗಿರಬಹುದಾದ ಪ್ರಮಾದವನ್ನು ಅಂಗೀಕರಿಸಿದರಲ್ಲದೆ ಆ ಅವರೊಂದಿಗೆ ಮಾತಾಡುವುದಾಗಿ ತಿಳಿಸಿದರು. ಅವರ ಮಾತಿಗಳಲ್ಲಿನ ಪ್ರಬುದ್ಧತೆಯನ್ನು ಮತ್ತು ಗಾಂಬೀರ್ಯ ಅಭಿನಂದನೀಯ; ಯಾಕೆಂದರೆ, ಸಚಿವರು ತಮ್ಮ ಅಧಿಕಾರಗಳಿಂದ ಆದ ತಪ್ಪುಗಳನ್ನು ಸಾಮಾನ್ಯವಾಗಿ ಒಪ್ಪಿಕೊಳ್ಳುವುದಿಲ್ಲ. ಆದರೆ ಲಕ್ಷ್ಮಿ ಹೆಬ್ಬಾಳ್ಕರ್ ಸ್ವಲ್ಪ ಡಿಫರೆಂಟ್ ಎನಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on