ಶಿಕ್ಷಕರ ದಿನಾಚರಣೆ ಕಾರ್ಯಕ್ರಮದ ಮಧ್ಯಭಾಗದಲ್ಲೇ ಹೊರಟು ನಿಂತ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಹೊರಡಿ ಎಂದ ಸತೀಶ್ ಜಾರಕಿಹೊಳಿ
ಮೈಕ್ ಮುಂದೆ ನಿಂತವರ ಭಾಷಣ ಮುಗಿಯುವ ಲಕ್ಷಣ ಕಾಣದಾದಾಗ ಅವರು ಟೈಂ ನೋಡಿಕೊಂಡು, ಬೆಳಗಾವಿ ಉಸ್ತುವಾರಿ ಸಚಿವರೂ ಆಗಿರುವ ಸತೀಶ್ ಅವರಿಗೆ ಹೊರಡಬೇಕಿರುವ ವಿಷಯ ತಿಳಿಸುತ್ತಾರೆ. ತೊಂದರೆಯಿಲ್ಲ ನೀವು ಹೊರಡಿ ಅಂತ ಹೇಳಿದಾಗ, ಲಕ್ಷ್ಮಿ ತಮ್ಮ ಸಹೋದರನನ್ನು ಕರೆದುಕೊಂಡು ಅಲ್ಲಿಂದ ಹೊರಡುತ್ತಾರೆ.
ಬೆಳಗಾವಿ: ಲೋಕೋಪಯೋಗಿ ಖಾತೆ ಸಚಿವ ಸತೀಶ್ ಜಾರಕಿಹೊಳಿ (Satish Jarkiholi), ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಖಾತೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಇಂದು ಬೆಳಗಾವಿಯಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗಿಯಾದರು. ವೇದಿಕೆ ಮೇಲೆ ಅವರೊಂದಿಗೆ ಲಕ್ಷ್ಮಿ ಸಹೋದರ ಹಾಗೂ ವಿಧಾನ ಪರಿಷತ್ ಸದಸ ಚೆನ್ನರಾಜ್ ಹಟ್ಟಿಹೊಳಿ (Channaraj Hattiholi) ಕೂಡ ಇದ್ದರು. ಅದರೆ ಸಚಿವೆಗೆ ಮತ್ತೊಂದು ಕಡೆಯೂ ಹೋಗಬೇಕಿತ್ತು ಆದರೆ ಕಾರ್ಯಕ್ರಮ ನಡೆಯುತ್ತಿರುವಾಗ ಎದ್ದು ಹೋಗುವುದು ಸರಿಯಲ್ಲ ಅಂತ ಅಂದುಕೊಂಡು ಕುಳಿತೇ ಇರುತ್ತಾರೆ. ಮೈಕ್ ಮುಂದೆ ನಿಂತವರ ಭಾಷಣ ಮುಗಿಯುವ ಲಕ್ಷಣ ಕಾಣದಾದಾಗ ಅವರು ಟೈಂ ನೋಡಿಕೊಂಡು, ಬೆಳಗಾವಿ ಉಸ್ತುವಾರಿ ಸಚಿವರೂ ಆಗಿರುವ ಸತೀಶ್ ಅವರಿಗೆ ಹೊರಡಬೇಕಿರುವ ವಿಷಯ ತಿಳಿಸುತ್ತಾರೆ. ತೊಂದರೆಯಿಲ್ಲ ನೀವು ಹೊರಡಿ ಅಂತ ಹೇಳಿದಾಗ, ಲಕ್ಷ್ಮಿ ತಮ್ಮ ಸಹೋದರನನ್ನು ಕರೆದುಕೊಂಡು ಅಲ್ಲಿಂದ ಹೊರಡುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ