ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾತಾಡಿದ್ದು ಕನ್ನಡವಲ್ಲ, ಮರಾಠಿ!

|

Updated on: Feb 05, 2024 | 11:49 AM

ಮರಾಠಿ ಮಾತಾಡುವ ಜನರ ವೋಟು ಕಳೆದುಕೊಳ್ಳುವ ಭೀತಿ ಸಚಿವೆಯನ್ನು ಮರಾಠಿಯಲ್ಲಿ ಮಾತಾಡಲು ಪ್ರೇರೇಪಿಸಿದ್ದರೆ ಆಶ್ಚರ್ಯವಿಲ್ಲ. ನಗರದ ಕುವೆಂಪು ನಗರದಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಅವರು ಮರಾಠಿಯಲ್ಲಿ ಮಾತಾಡುತ್ತಾ ತಮ್ಮ ಮಗನ ಪರ ಪ್ರಚಾರ ಮಾಡುತ್ತಿದ್ದಾರೆ. ಅವರು ಮರಾಠಿಯಲ್ಲಿ ಏನು ಹೇಳುತ್ತಿದ್ದಾರೋ ಗೊತ್ತಿಲ್ಲ, ಅವರು ಆ ಭಾಷೆಯಲ್ಲಿ ಮಾತಾಡುತ್ತಿರುವುದರಿಂದ ಅದನ್ನು ವರದಿ ಮಾಡುವ ಅವಶ್ಯಕತೆಯೂ ನಮಗಿಲ್ಲ.

ಬೆಳಗಾವಿ: ಬೆಳಗಾವಿ ಗಡಿ ವಿವಾದದ ಬಗ್ಗೆ ಅಲ್ಲಿನ ಜನ ಪ್ರತಿನಿಧಿಗಳು ಒಂದು ಸ್ಪಷ್ಟ ನಿಲುವು ತಳೆಯಲು ಯಾಕೆ ಹಿಂದೇಟು ಹಾಕುತ್ತಾರೆ ಅನ್ನೋದಿಕ್ಕೆ ಇಲ್ಲಿದೆ ಕಾರಣ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾತಾಡುತ್ತುರುವುದನ್ನು ಕೇಳಿಸಿಕೊಳ್ಳಿ. ಬೆಳಗಾವಿ ಹೊರಗೆ ನಡೆಯುವ ಸಭೆ ಸಮಾರಂಭಗಳಲ್ಲಿ ಮತ್ತು ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರೆಲ್ಲ ಸ್ವಚ್ಛ ಮತ್ತು ಸ್ಫುಟವಾಗಿ ಕನ್ನಡ ಮಾತಾಡುತ್ತಾರೆ. ಆದರೆ, ಬೆಳಗಾವಿಯಲ್ಲಿ ಕಾರ್ಯಕರ್ತರ ಸಭೆ ನಡೆಸಿ ಮಾತಾಡುವಾಗ ಅವರನ್ನು ಮರಾಠಿಯಲ್ಲಿ ಸಂಬೋಧಿಸುತ್ತಾರೆ. ಮರಾಠಿ ಮಾತಾಡುವ ಜನರ ವೋಟು ಕಳೆದುಕೊಳ್ಳುವ ಭೀತಿ ಸಚಿವೆಯನ್ನು ಮರಾಠಿಯಲ್ಲಿ ಮಾತಾಡಲು ಪ್ರೇರೇಪಿಸಿದ್ದರೆ ಆಶ್ಚರ್ಯವಿಲ್ಲ. ನಗರದ ಕುವೆಂಪು ನಗರದಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಅವರು ಮರಾಠಿಯಲ್ಲಿ ಮಾತಾಡುತ್ತಾ ತಮ್ಮ ಮಗನ ಪರ ಪ್ರಚಾರ ಮಾಡುತ್ತಿದ್ದಾರೆ. ಅವರು ಮರಾಠಿಯಲ್ಲಿ ಏನು ಹೇಳುತ್ತಿದ್ದಾರೋ ಗೊತ್ತಿಲ್ಲ, ಅವರು ಆ ಭಾಷೆಯಲ್ಲಿ ಮಾತಾಡುತ್ತಿರುವುದರಿಂದ ಅದನ್ನು ವರದಿ ಮಾಡುವ ಅವಶ್ಯಕತೆಯೂ ನಮಗಿಲ್ಲ.

ಬೆಳಗಾವಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರೆಲ್ಲ ಮರಾಠಿ ಭಾಷಿಕರೇ? ಅಥವಾ ಅವರು ಬಹುಸಂಖ್ಯಾತರೇ? ಬೆಳಗಾವಿಯಲ್ಲಿ ಹುಟ್ಟಿಬೆಳೆದವರಿಗೆ ಕನ್ನಡ ಮಾತಾಡಲು ಬರಲ್ಲವೇ? ಲಕ್ಷ್ಮಿ ಹೆಬ್ಬಾಳ್ಕರ್ ಕನ್ನಡ ಮಾತಾಡುತ್ತಾರೆಂದರೆ ಉಳಿದವರಿಗೂ ಭಾಷೆ ಗೊತ್ತಿರಬೇಕಲ್ಲವೇ? ಕೆಲ ದಿನಗಳ ಹಿಂದೆ, ಖಾನಾಪುರದದಲ್ಲಿ ಸಂಸದ ಅನಂತ ಕುಮಾರ್ ಹೆಗಡೆ ನಡೆಸಿದ ಕಾರ್ಯಕರ್ತರ ಸಭೆಯಲ್ಲೂ ಜನ ಮರಾಠಿ ಮಾತಾಡುತ್ತಿದ್ದರು ಮತ್ತು ದುಭಾಷಿಗಳು ಅದನ್ನು ಹೆಗಡೆಯವರಿಗೆ ತರ್ಜುಮೆ ಮಾಡುತ್ತಿದ್ದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on