ಕೇವಲ ಹಾಲು ಮಾತ್ರವಲ್ಲ ಅದರ ಉತ್ಪನ್ನಗಳ ಬೆಲೆನೂ ಜಾಸ್ತಿ ಆಗುತ್ತೆ: ಸುಳಿವು ಕೊಟ್ಟ ಸವದಿ

Updated on: Oct 29, 2026 | 6:37 PM

ಕೊನೆಗೂ ರಾಜ್ಯ ಸರ್ಕಾರ ನಂದಿನಿ ಹಾಲಿನ ದರವನ್ನು 8 ರೂ. ಹೆಚ್ಚಳ ಮಾಡಿದೆ. ಈ 8 ರೂಪಾಯಿ ಪೈಕಿ ರೈತರಿಗೆ 7 ರೂಪಾಯಿ ಮತ್ತು ಉಳಿದ 1 ರೂಪಾಯಿ ಒಕ್ಕೂಟಗಳಿಗೆ ಸಿಗಲಿದ್ದು, ನವೆಂಬರ್ 1 ರಿಂದ ಪರಿಸ್ಕೃತ ದರ ಜಾರಿಗೆ ಬರಲಿದೆ. ಇದರ ಬೆನ್ನಲ್ಲೇ ಇದೀಗ ಹೋಟೆಲ್​​ಗಳಲ್ಲಿ ಕಾಫಿ,ಟೀ ಹಾಗೂ ತಿಂಡಿ ತಿನಿಸುಗಳ ದರ ಏರಿಕೆಯಾಗಲಿದೆ. ಇದರ ಮಧ್ಯೆ ಇದೀಗ ಹಾಲಿನ ಉತ್ಪನ್ನಗಳ ದರ ಸಹ ಹೆಚ್ಚಳವಾಗಲಿದೆ. ಈ ಬಗ್ಗೆ ಸ್ವತಃ ಸಹಕಾರಿ ಸಚಿವ ಲಕ್ಷ್ಮಣ ಸವದಿ ಸುಳಿವು ನೀಡಿದ್ದಾರೆ.

ಬೆಂಗಳೂರು, (ಅಕ್ಟೋಬರ್ 29): ಕೊನೆಗೂ ರಾಜ್ಯ ಸರ್ಕಾರ ನಂದಿನಿ ಹಾಲಿನ ದರವನ್ನು 8 ರೂ. ಹೆಚ್ಚಳ ಮಾಡಿದೆ. ಈ 8 ರೂಪಾಯಿ ಪೈಕಿ ರೈತರಿಗೆ 7 ರೂಪಾಯಿ ಮತ್ತು ಉಳಿದ 1 ರೂಪಾಯಿ ಒಕ್ಕೂಟಗಳಿಗೆ ಸಿಗಲಿದ್ದು, ನವೆಂಬರ್ 1 ರಿಂದ ಪರಿಸ್ಕೃತ ದರ ಜಾರಿಗೆ ಬರಲಿದೆ. ಇದರ ಬೆನ್ನಲ್ಲೇ ಇದೀಗ ಹೋಟೆಲ್​​ಗಳಲ್ಲಿ ಕಾಫಿ,ಟೀ ಹಾಗೂ ತಿಂಡಿ ತಿನಿಸುಗಳ ದರ ಏರಿಕೆಯಾಗಲಿದೆ. ಇದರ ಮಧ್ಯೆ ಇದೀಗ ಹಾಲಿನ ಉತ್ಪನ್ನಗಳ ದರ ಸಹ ಹೆಚ್ಚಳವಾಗಲಿದೆ. ಈ ಬಗ್ಗೆ ಸ್ವತಃ ಸಹಕಾರಿ ಸಚಿವ ಲಕ್ಷ್ಮಣ ಸವದಿ ಸುಳಿವು ನೀಡಿದ್ದಾರೆ.

ಸಚಿವ ಸಂಪುಟ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಲಕ್ಷ್ಮಣ ಸವದಿ, ಹಾಲಿನ ದರ 10 ರೂಪಾಯಿ ಏರಿಕೆ ಮಾಡುವಂತೆ ಒಕ್ಕೂಟಗಳ ಬೇಡಿಕೆ ಇತ್ತು. ಆದ್ರೆ, 8 ರೂಪಾಯಿ ಹೆಚ್ಚಳ ಮಾಡಿದ್ದೇವೆ. ರೈತರಿಗೆ 7 ರೂಪಾಯಿ ಒಕ್ಕೂಟಗಳಿಗೆ 1 ರೂಪಾಯಿ ಹೆಚ್ಚಳ ಮಾಡಲಾಗಿದೆ. ಬೇರೆ ರಾಜ್ಯಗಳಲ್ಲಿ ಹಾಲಿನ ದರ ಜಾಸ್ತಿ ಇದೆ. ನಮ್ಮ ರಾಜ್ಯದಲ್ಲಿ ಹಾಲಿನ ದರ ಏರಿಕೆ ಮಾಡೋದು ಅನಿವಾರ್ಯವಾಗಿತ್ತು. ಇಲ್ಲದಿದ್ರೆ ರೈತರು ಬೇರೆ ರಾಜ್ಯಗಳಿಗೆ ಹಾಲು ಮಾರಾಟ ಮಾಡ್ತಾರೆ. ಆ ರೀತಿ ರೈತರು ಬೇರೆ ರಾಜ್ಯಗಳಿಗೆ ಹಾಲು ಮಾರಾಟ ಮಾಡಿದ್ರೆ ಹಾಲಿನ ಅಭಾವ ಉಂಟಾಗುತ್ತೆ. ಗ್ರಾಹಕರು ಕೂಡ ಈ ದರ ಏರಿಕೆಗೆ ಸಪೋರ್ಟ್ ಮಾಡಬೇಕು. ನೀವು ಕೊಡುವ ದುಡ್ಡು ರೈತರಿಗೆ ಹೋಗುತ್ತೆ. ಹಾಗೇ ಒಂದು ಏರಿಕೆ ಆದ್ರೆ ಎಲ್ಲವೂ ಏರಿಕೆ ಆಗುತ್ತೆ ಎಂದು ಹೇಳುವ ಮೂಲಕ ಹಾಲಿನ ಉತ್ಪನ್ನ ದರ ಹೆಚ್ಚಳದ ಸುಳಿವು ನೀಡಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ರಮೇಶ್ ಬಿ. ಜವಳಗೇರಾ

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More