Did DK Suresh warn MB Patil? ಯಾರಿಂದಲೂ ವಾರ್ನ್ ಮಾಡಿಸಿಕೊಳ್ಳುವಷ್ಟು ದುರ್ಬಲ ನಾನಲ್ಲ: ಎಂಬಿ ಪಾಟೀಲ್, ಸಚಿವರು

ಅರುಣ್​ ಕುಮಾರ್​ ಬೆಳ್ಳಿ

Updated on: May 24, 2023 | 5:27 PM

ತಮ್ಮ ವಿವಾದಾತ್ಮಕ ಮುಖ್ಯಮಂತ್ರಿ ಪವರ್ ಶೇರಿಂಗ್ ಹೇಳಿಕೆ ಬಗ್ಗೆ ಎಮ್ ಬಿ ಪಾಟೀಲ್ ಕಾಮೆಂಟ್ ಮಾಡಬಯಸಲಿಲ್ಲ.

ಬೆಂಗಳೂರು: ‘ಡಿಕೆ ಸುರೇಶ್ (DK Suresh) ನನಗೆ ವಾರ್ನಿಂಗ್ ಕೊಡುವ ರೀತಿಯಲ್ಲಿ ಮಾತಾಡಿಲ್ಲ, ವಿಜಯಪುರದವನಾಗಿರುವ ನಾನು ಬೇರೆ ಯಾರಿಂದಲೇ ಆಗಲಿ ವಾರ್ನ್ ಮಾಡಿಸಿಕೊಳ್ಳುವಷ್ಟು ದುರ್ಬಲನಾಗಿಲ್ಲ, ಅಪ್ಪ ಅಮ್ಮನಿಗೆ ಬಿಟ್ಟು ಯಾರಿಗೂ ನಾನು ಹೆದರಿದವನಲ್ಲ’ ಎಂದು ಸಚಿವ ಎಂಬಿ ಪಾಟೀಲ್ (MB Patil) ಇಂದು ಬೆಂಗಳೂರಲ್ಲಿ ಹೇಳಿದರು. ಸುರೇಶ್ ಮತ್ತು ಡಿಕೆ ಶಿವಕುಮಾರ್ (DK Shivakumar) ನಡುವಿನ ಭಾಂಧವ್ಯ ಚೆನ್ನಾಗಿದೆ, ಎಂದು ಹೇಳಿದ ಪಾಟೀಲ್, ತನ್ನ ಕಚೇರಿ ಕಡೆ ಹೋಗುತ್ತಿದ್ದಾಗ ಸುರೇಶ್ ಅವರು ‘ಎಂಬಿ ಪಾಟೀಲ್ರೇ’ ಅಂತ ಪ್ರೀತಿಯಿಂದ ಕರೆದು, ತಮಾಷೆಯಾಗಿ ‘ಗಟ್ಟಿಯಾಗಿರಿ’ ಅಂತ ಹೇಳಿದರೇ ಹೊರತು ತಮ್ಮ ನಡುವೆ ಯಾವುದೇ ವಾಗ್ವಾದ ನಡೆಯಲಿಲ್ಲ ಎಂದರು. ತಮ್ಮ ವಿವಾದಾತ್ಮಕ ಮುಖ್ಯಮಂತ್ರಿ ಪವರ್ ಶೇರಿಂಗ್ ಹೇಳಿಕೆ ಬಗ್ಗೆ ಅವರು ಕಾಮೆಂಟ್ ಮಾಡಬಯಸಲಿಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.