Cold War: ಉಪ-ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಸಚಿವ ಎಂಬಿ ಪಾಟೀಲ್ ನಡುವಿನ ಶೀತಲ ಸಮರ ಶೀತಲವಾಗಿ ಉಳಿಯುವ ಲಕ್ಷಣಗಳಿಲ್ಲ
ಪಾಟೀಲ್ ಯಾಕೆ ಹೈಕಮಾಂಡ್ ಹೇಳಿದ್ದನ್ನು ಪುನರುಚ್ಛರಿಸಬೇಕು, ಹೈಕಮಾಂಡ್ ಹಾಗೆ ಮಾಡಲು ಅಣತಿ ನೀಡಿದೆಯೇ? ಎಂಬ ಪ್ರಶ್ನೆಗಳು ಏಳುತ್ತಿವೆ.
ಬೆಂಗಳೂರು: ಉಪ-ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಮತ್ತು ಸಚಿವ ಎಂಬಿ ಪಾಟೀಲ್ (MB Patil) ನಡುವಿನ ಭಿನ್ನಾಭಿಪ್ರಾಯಗಳು ಕ್ರಮೇಣವಾಗಿ ಬಹಿರಂಗಗೊಳ್ಳುತ್ತಿರುವಂತೆ ಭಾಸವಾಗುತ್ತಿದೆ. ಪಾಟೀಲ್ ತಮಗೆ ಸಂಬಂಧಿಸದ ವಿಷಯವನನ್ನು ಮಾತಾಡತೊಡಗಿದ್ದು ಸರ್ಕಾರದ ಇತರ ಪ್ರತಿನಿಧಿಗಳು ಮತ್ತು ಹೈಕಮಾಂಡನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಅಧಿಕಾರ ಹಂಚಿಕೆಯ ಬಗ್ಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ (KC Venugopal) ಹೇಳಿದ್ದನ್ನೇ ಪುನರಾವರ್ತಿಸುತ್ತಿದ್ದೇನೆ ಅನ್ನುತ್ತಾರೆ. ಇವರು ಯಾಕೆ ಅದನ್ನು ಪುನರುಚ್ಛರಿಸಬೇಕು, ಹೈಕಮಾಂಡ್ ಹಾಗೆ ಮಾಡಲು ಅಣತಿ ನೀಡಿದೆಯೇ? ಎಂಬ ಪ್ರಶ್ನೆಗಳು ಏಳುತ್ತಿವೆ. ಅವರ ಹೇಳಿಕೆಗಳಿಗೆ ಡಿಕೆ ಶಿವಕುಮಾರ್ ಸೂಕ್ತವಾದ ಪ್ರತಿಕ್ರಿಯೆ ನೀಡಿದ್ದಾರೆ. ಯಾರು ಏನಾದರೂ ಹೇಳಿಕೊಳ್ಳಲಿ, ಎಲ್ಲವನ್ನು ನೋಡಿಕೊಳ್ಳಲು ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಿದ್ದಾರೆ, ಮುಖ್ಯಮಂತ್ರಿಗಳಿದ್ದಾರೆ ಮತ್ತು ಎಐಸಿಸಿ ಅಧ್ಯಕ್ಷರಿದ್ದಾರೆ ಎಂದು ಶಿವಕುಮಾರ್ ಹೇಳಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ