ಶಾಲೆಯ ಮೇಲಿನ ಬರಹ ಬದಲಾಯಿಸಿದಕ್ಕೆ ‘ಪ್ರಬುದ್ಧತೆ’ಯ ಸಮಾಜಾಯಿಷಿ ನೀಡಿದ ಪ್ರಿಯಾಂಕ್ ಖರ್ಗೆ ಅಪ್ರಬುದ್ಧರಂತೆ ಮಾತಾಡಿದರು!

|

Updated on: Feb 19, 2024 | 5:13 PM

ಬದಲಾವಣೆ ಪ್ರಕೃತಿ ನಿಯಮ, ಡಾ ಬಿ ಅರ್ ಅಂಬೇಡ್ಕರ್, ಬುದ್ಧ ಮತ್ತು ಬಸವಣ್ಣ ಮೊದಲಾದವರೆಲ್ಲ ಕೇವಲ ಸಮೃದ್ಧ ಸಮಾಜ ಮಾತ್ರವಲ್ಲ ಒಂದು ಪ್ರಬುದ್ಧ ಸಮಾಜವವನ್ನು ಪ್ರತಿಪಾದಿಸಿದ್ದರು, ಮಕ್ಕಳಲ್ಲಿ ವೈಜ್ಞಾನಿಕ ಮತ್ತು ಪ್ರಶ್ನೆ ಕೇಳುವ ಮನೋಭಾವ ಬೆಳೆಯಬೇಕು, ಕಲಿಕೆಯಲ್ಲಿ ಕುತೂಹಲ ಮೂಡಬೇಕು ಅಂತೆಲ್ಲ ಖರ್ಗೆ ಹೇಳುತ್ತಾರೆ.

ಬೆಂಗಳೂರು: ಸರ್ಕಾರ ತಪ್ಪೆಸಗಿದಾಗ ಅಥವಾ ಜನಾಭಿಪ್ರಾಯ ಇಲ್ಲವೇ ಸಾರ್ವಜನಿಕ ಆಶಯಕ್ಕೆ ವ್ಯತಿರಿಕ್ತವಾಗಿ ನಡೆದುಕೊಂಡಾಗ ಅದರ ಪ್ರತಿನಿಧಿಗಳು ನೀಡುವ ಸಮಜಾಯಿಷಿ ಅಪ್ರಬುದ್ಧ, ತಮಾಷೆಯೆನಿಸಿ ಜನರಲ್ಲಿ ನಗೆ ಮೂಡಿಸುತ್ತವೆ. ವಿಜಯಪುರ ಜಿಲ್ಲೆಯ ಮೊರಾರ್ಜಿ ವಸತಿ ಶಾಲೆಗಳ (Morarji residential schools) ಮುಖ್ಯದ್ವಾರದ ಮೇಲ್ಭಾಗದಲ್ಲಿ ಜ್ಞಾನ ದೇಗುಲವಿದು ಕೈಮುಗಿದು ಒಳಗೆ ಬಾ, ಅಂತ ರಾಷ್ಟ್ರಕವಿ ಕುವೆಂಪು (Kuvempu) ವಿರಚಿತ ಕವಿತೆಯ ಬರಹವನ್ನು ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ ಎಂದು ಬದಲಿಸುವ ಕೆಲಸವನ್ನು ರಾಜ್ಯದ ‘ಘನ’ ಸರ್ಕಾರ ಮಾಡಿದೆ. ಯಾಕೆ ಹೀಗೆ ಅಂತ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಅವರನ್ನು ಮಾಧ್ಯಮ ಪ್ರತಿನಿಧಿಗಳು ಇಂದು ವಿಧಾನ ಸೌಧದ ಆವರಣದಲ್ಲಿ ಕೇಳಿದಾಗ ಅಗಲೇ ಹೇಳಿದಂತೆ ಅವರು ನೀಡುವ ಪ್ರತಿಕ್ರಿಯೆ ಹಾಸ್ಯಾಸ್ಪದ ಅನಿಸುತ್ತದೆ. ಬದಲಾವಣೆ ಪ್ರಕೃತಿ ನಿಯಮ, ಡಾ ಬಿ ಅರ್ ಅಂಬೇಡ್ಕರ್, ಬುದ್ಧ ಮತ್ತು ಬಸವಣ್ಣ ಮೊದಲಾದವರೆಲ್ಲ ಕೇವಲ ಸಮೃದ್ಧ ಸಮಾಜ ಮಾತ್ರವಲ್ಲ ಒಂದು ಪ್ರಬುದ್ಧ ಸಮಾಜವವನ್ನು ಪ್ರತಿಪಾದಿಸಿದ್ದರು, ಮಕ್ಕಳಲ್ಲಿ ವೈಜ್ಞಾನಿಕ ಮತ್ತು ಪ್ರಶ್ನೆ ಕೇಳುವ ಮನೋಭಾವ ಬೆಳೆಯಬೇಕು, ಕಲಿಕೆಯಲ್ಲಿ ಕುತೂಹಲ ಮೂಡಬೇಕು ಅಂತೆಲ್ಲ ಹೇಳುತ್ತಾರೆ. ಅಂದರೆ, ಮೊದಲೆಲ್ಲ ವಿದ್ಯಾರ್ಥಿಗಳಲ್ಲಿ ಪ್ರಶ್ನೆ ಕೇಳುವ ಮನೋಭಾವ ಇರಲಿಲ್ಲವೇ? ಬರಹ ಬದಲಾಯಿಸಿದ ಕೂಡಲೇ ಅದು ಬಂದು ಬಿಡುತ್ತದಯೇ? ಆಡುವ ಮಾತಿಗೆ ಲಾಜಿಕ್ ಬೇಡ್ವಾ ಖರ್ಗೆ ಸಾಹೇಬರೇ?

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:37 pm, Mon, 19 February 24

Follow us on