ಬಿಜೆಪಿ ಅಧಿಕಾರದಲ್ಲಿ ಇಲ್ಲದ ಕಡೆ ರಾಜ್ಯಪಾಲರ ಮೂಲಕ ಆಳ್ವಿಕೆ; ರಾಜ್ಯಪಾಲರ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ ಮಾಡಿದ್ದಾರೆ. ರಾಜ್ಯಪಾಲರ ಮಾತಿಗೆ ಗೌರವ ಕೊಟ್ಟು ಗೃಹ ಇಲಾಖೆಯವರು ಕೇಳಿದ್ದಾರೆ. ಅಷ್ಟೇ ಸೀಮಿತವಾಗಿದೆ. ರಾಜ್ಯಪಾಲರು ಏಕೆ ಇಷ್ಟು ಆಸಕ್ತಿ ಇದ್ದಾರೆ ಎಂದು ಗಮನಿಸಬೇಕು. ರಾಜ್ಯಪಾಲರಿಗೆ ಕೇಂದ್ರ ಸರ್ಕಾರದಿಂದ ನಿರ್ದೇಶನವಿದೆಯಾ? ಸರ್ಕಾರ, ಹರಿಪ್ರಸಾದ್ಗೆ ಮುಜುಗರ ಮಾಡಬೇಕು ಅಂತಾ ಇದ್ಯಾ ಎಂದು ಪ್ರಶ್ನಿಸಿದ್ದಾರೆ.
ಬೆಂಗಳೂರು, ಜ.20: ರಾಜ್ಯದಲ್ಲಿ ಗೋಧ್ರಾ ರೀತಿ ಘಟನೆ ಆಗುತ್ತೆಂದು ಹೇಳಿಕೆ ಹಿನ್ನೆಲೆ ಸಿಸಿಬಿ ಅಧಿಕಾರಿಗಳಿಂದ MLC ಹರಿಪ್ರಸಾದ್ (MLA Hariprasad) ವಿಚಾರಣೆ ವಿಚಾರಕ್ಕೆ ಸಂಬಂಧಿಸಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Thawar Chand Gehlot) ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ ಮಾಡಿದ್ದಾರೆ. ನೀವು ಗಮನಿಸಬೇಕು, ಯಾರು ನಿರ್ದೇಶನ ಮಾಡುತ್ತಿದ್ದಾರೆ. ರಾಜ್ಯಪಾಲರು ಪದೇಪದೆ ಇದರ ಬಗ್ಗೆ ಕೇಳ್ತಿದ್ದಾರೆ. ಇದು ತನಿಖೆ ಆಗ್ತಿದೆಯಾ? ಇಲ್ಲವಾ ಎಂದು ಪದೇಪದೆ ಕೇಳುತ್ತಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಅವರು ರಾಜ್ಯಪಾಲರಾದ ಗೆಹ್ಲೋಟ್ ಅವರು ಒತ್ತಡ ಹಾಕುತ್ತಿದ್ದಾರೆ ಎಂದು ಹೇಳಿದ್ದಾರೆ.
ರಾಜ್ಯಪಾಲರ ಮಾತಿಗೆ ಗೌರವ ಕೊಟ್ಟು ಗೃಹ ಇಲಾಖೆಯವರು ಕೇಳಿದ್ದಾರೆ. ಅಷ್ಟೇ ಸೀಮಿತವಾಗಿದೆ. ರಾಜ್ಯಪಾಲರು ಏಕೆ ಇಷ್ಟು ಆಸಕ್ತಿ ಇದ್ದಾರೆ ಎಂದು ಗಮನಿಸಬೇಕು. ರಾಜ್ಯಪಾಲರಿಗೆ ಕೇಂದ್ರ ಸರ್ಕಾರದಿಂದ ನಿರ್ದೇಶನವಿದೆಯಾ? ಸರ್ಕಾರ, ಹರಿಪ್ರಸಾದ್ಗೆ ಮುಜುಗರ ಮಾಡಬೇಕು ಅಂತಾ ಇದ್ಯಾ? ಒಂದು ಫ್ಯಾಟರ್ನ್ ಇದೆ, ಎಲ್ಲೆಲ್ಲಿ ಬಿಜೆಪಿ ಇಲ್ಲ ಅಲ್ಲಲ್ಲಿ ರಾಜ್ಯಪಾಲರ ಮೂಲಕ ಆಳ್ವಿಕೆ ಮಾಡಲು ಹೊರಟಿದ್ದಾರೆ. ಏನೇ ಇದ್ದರೂ ಕಾನೂನು ಚೌಕಟ್ಟಿನಲ್ಲಿ ಮಾಡ್ತೇವೆ. ಕಾನೂನು ಸುವ್ಯವಸ್ಥೆಗೂ, ರಾಜ್ಯಪಾಲರಿಗೆ ಏನು ಸಂಬಂಧ? ಕಾನೂನು ಸುವ್ಯವಸ್ಥೆ ಹದಗೆಟ್ಟಿದೆಯಾ? ಹಿಂದಿನ ಸರ್ಕಾರ ಇದ್ದಾಗ ಯಾವತ್ತೂ ಈ ರೀತಿ ಆಗಿಲ್ಲ. ಈ ಬಾರಿ ಯಾಕೆ ಈ ರೀತಿ ಆಗುತ್ತಿದೆ. ಜನ ಇದರ ಬಗ್ಗೆ ವಿಚಾರ ಮಾಡಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ನಾನು ಎಂದೂ ಸಿಎಂ ಹೆಸರೇಳಿ ಮಾತಾಡಿಲ್ಲ
ಸಿಸಿಬಿ ಪೊಲೀಸರ ವಿಚಾರಣೆ ವಿಚಾರ ಬೆಂಗಳೂರಿನಲ್ಲಿ ಪರಿಷತ್ ಸದಸ್ಯ ಬಿಕೆ ಹರಿಪ್ರಸಾದ್ ಪ್ರತಿಕ್ರಿಯೆ ನೀಡಿದ್ದಾರೆ. ರಾಜ್ಯಪಾಲರಿಗೆ ಬಿಜೆಪಿಯವರು ದೂರು ಕೊಟ್ಟಿದ್ದರು. ವಿಚಾರಣೆ ಮಾಡಿ ತಿಳಿಸಿ ಎಂದು ರಾಜ್ಯಪಾಲರು ಹೇಳಿರಬೇಕು. ಎಲ್ಲಾ ಪ್ರಕರಣಗಳು ಹೀಗೆ ಆದರೆ ಉತ್ತಮ. ಆದರೆ ನಮಗೆ ಮಾತ್ರ ಹೀಗೆ ಅಂದ್ರೆ ಉತ್ತರ ಹುಡುಕಬೇಕಾಗುತ್ತೆ. ರಾಜ್ಯಪಾಲರು ಸಂವಿಧಾನದ ಒಂದು ಅಂಗ ಇದ್ದಂತೆ. ನಾನು ಪರಿಷತ್ ಸದಸ್ಯ, ಸ್ಪೀಕರ್ ಅವರ ಅನುಮತಿ ತೆಗೆದುಕೊಳ್ಳಬೇಕಿತ್ತು. ಶಿಷ್ಟಾಚಾರದ ಉಲ್ಲಂಘನೆ ಕೂಡ ಆಗಿದೆ. ಸಿಎಂ ಗಮನಕ್ಕೆ ತಂದಿದ್ದೇವೆ ಅಂತ ಪೊಲೀಸರು ಹೇಳಿದ್ದಾರೆ. ಆದರೆ ಇದು ಗೃಹ ಸಚಿವರ ಗಮನಕ್ಕೆ ಇಲ್ಲ ಅನ್ನಿಸುತ್ತದೆ. ನಾನು ಎಂದೂ ಸಿಎಂ ಹೆಸರೇಳಿ ವಿರುದ್ಧ ಮಾತಾಡಿಲ್ಲ.
ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿಕೊಂಡರೆ ಹೇಗೆ? ಒಳ ಮೀಸಲಾತಿ ವಿಚಾರ ಹಲವಾರು ವರ್ಷಗಳಿಂದಲೂ ಇದೆ. ದೆಹಲಿಯಲ್ಲಿ ರೋಹಿಣಿ ಕಮಿಷನ್ ಅಂತಲೂ ಮಾಡಿದ್ದಾರೆ. ಸರ್ಕಾರ ತೀರ್ಮಾನ ಇವಾಗ ತೆಗೆದುಕೊಂಡಿದೆ. ಹಿಂದೆ ಬಿಜೆಪಿ ತೀರ್ಮಾನ ತೆಗೆದುಕೊಂಡು ಕೇಂದ್ರಕ್ಕೆ ಕಳಿಸಿದ್ರು ಆಗ ಅವರು ಗೊತ್ತಿಲ್ಲ ಅಂದ್ರು. ಆದರೆ ಏನೇ ಆಗಬೇಕು ಅಂದರ ಸಂಸತ್ತಿಗೆ ಬರಬೇಕು. ಕಾಂತರಾಜ್ ವರದಿ ಏನಿದೆ ಏನಿಲ್ಲ ಅನ್ನೋದು ಗೊತ್ತಿಲ್ಲ. ವರದಿಯಲ್ಲಿ ಏನಿದೆ ಅಂತ ಬಹಿರಂಗ ಗೊಳಿಸಬೇಕು. ಒಳ್ಳೆಯದು ಕೆಟ್ಟದು ಏನಿದೆ ಅಂತ ಗೊತ್ತಾಗಬೇಕು ಎಂದರು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ