ಕಾಂಗ್ರೆಸ್ ಪಕ್ಷಕ್ಕೆ ಬಿಜೆಪಿ ಎಂಎಲ್​ಎಗಳೇ ಬರ್ತಾರೆ; ಸಚಿವ ಆರ್ ಬಿ ತಿಮ್ಮಾಪುರ

‘ತುಂಬಾ ಜನ ಬರಲು ಈಗಾಗಲೇ ರೆಡಿ ಇದ್ದಾರೆ. ಲೋಕಸಭಾ ಚುನಾವಣೆ ಅನೌನ್ಸ್ ಆದ ಕೂಡಲೇ ಎಲ್ಲರೂ ಬರುತ್ತಾರೆ. ಈ ಕುರಿತು ಚುನಾವಣೆ ಘೋಷಣೆ ಆದ ಮೇಲೆ ಹೇಳುತ್ತೇನೆ ಎಂದು ಸಚಿವ ಆರ್​ಬಿ ತಿಮ್ಮಾಪುರ ಹೇಳಿದ್ದಾರೆ.

ಬಾಗಲಕೋಟೆ, ನ.24: ಕಾಂಗ್ರೆಸ್ ಪಕ್ಷಕ್ಕೆ ಬಿಜೆಪಿ ಎಂಎಲ್​ಎಗಳೇ ಬರುತ್ತಾರೆ ನೋಡುತ್ತೀರಿ ಎಂದು ಸಚಿವ ಆರ್.ಬಿ ತಿಮ್ಮಾಪುರ(RB Timmapur) ಹೇಳಿದ್ದಾರೆ. ಗುಳೇದಗುಡ್ಡ(Guledagudda) ದಲ್ಲಿ ಮಾತನಾಡಿದ ಅವರು ‘ತುಂಬಾ ಜನ ಬರಲು ಈಗಾಗಲೇ ರೆಡಿ ಇದ್ದಾರೆ. ಲೋಕಸಭಾ ಚುನಾವಣೆ ಅನೌನ್ಸ್ ಆದ ಕೂಡಲೇ ಎಲ್ಲರೂ ಬರುತ್ತಾರೆ. ಈ ಕುರಿತು ಚುನಾವಣೆ ಘೋಷಣೆ ಆದ ಮೇಲೆ ಹೇಳುತ್ತೇನೆ ಎಂದರು. ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಉಭಯ ಪಕ್ಷಗಳಲ್ಲೂ ಅಸಮಧಾನಿತರು ಇದ್ದು, ಇದನ್ನೇ ಗಾಳವಾಗಿಸಿಕೊಳ್ಳುತ್ತಾರಾ, ಎಷ್ಟು ಜನ ಶಾಸಕರು ಪಕ್ಷ ಬದಲಾವಣೆ ಮಾಡಲಿದ್ದಾರೆ ಎಂದು ಕಾದುನೋಡಬೇಕಿದೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ