ಚಿಕ್ಕಮಗಳೂರು: ಕಾಡಾನೆ ಕಾರ್ಯಚರಣೆ ವೇಳೆ ETF ಸಿಬ್ಬಂದಿ ಸಾವು; ಯಜಮಾನನ ಮೃತದೇಹ ನೋಡಿ ಸಾಕು ನಾಯಿಯ ರೋಧನೆ, ಇಲ್ಲಿದೆ ವಿಡಿಯೋ

ಕಾಡಾನೆ(Wild Elephant) ಕಾರ್ಯಚರಣೆ ವೇಳೆ ETF ಸಿಬ್ಬಂದಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಯಜಮಾನನ ಮೃತದೇಹ ನೋಡಿ ಸಾಕುನಾಯಿ(Dog)ಯ ರೋಧನೆ ಮುಗಿಲು ಮುಟ್ಟಿದೆ. ಕಾಡಾನೆ ದಾಳಿಗೆ ಸಾವನ್ನಪ್ಪಿದ ಗೌಡಹಳ್ಳಿ ಗ್ರಾಮದ ETF ಸಿಬ್ಬಂದಿ ಕಾರ್ತಿಕ್ ತನ್ನ ನಾಯಿಯನ್ನು ಪ್ರೀತಿಯಿಂದ ಸಾಕಿದ್ದರು. ಈ ಹಿನ್ನಲೆ ಒಡೆಯನ ಮೃತದೇಹದ ಎದುರು ಸಾಕು ನಾಯಿ ಕಣ್ಣೀರು ಹಾಕುತ್ತಿದೆ.

Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on: Nov 24, 2023 | 4:40 PM

ಚಿಕ್ಕಮಗಳೂರು, ನ.24: ಜಿಲ್ಲೆಯ ಮೂಡಿಗೆರೆ (Mudigere)ತಾಲೂಕಿನ ಗೌಡಹಳ್ಳಿ ಬಳಿ ಕಾಡಾನೆ(Wild Elephant) ಕಾರ್ಯಚರಣೆ ವೇಳೆ ETF ಸಿಬ್ಬಂದಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಯಜಮಾನನ ಮೃತದೇಹ ನೋಡಿ ಸಾಕುನಾಯಿ(Dog)ಯ ರೋಧನೆ ಮುಗಿಲು ಮುಟ್ಟಿದೆ. ಕಾಡಾನೆ ದಾಳಿಗೆ ಸಾವನ್ನಪ್ಪಿದ ಗೌಡಹಳ್ಳಿ ಗ್ರಾಮದ ETF ಸಿಬ್ಬಂದಿ ಕಾರ್ತಿಕ್ ತನ್ನ ನಾಯಿಯನ್ನು ಪ್ರೀತಿಯಿಂದ ಸಾಕಿದ್ದರು. ಈ ಹಿನ್ನಲೆ ಒಡೆಯನ ಮೃತದೇಹದ ಎದುರು ಸಾಕು ನಾಯಿ ಕಣ್ಣೀರು ಹಾಕುತ್ತಿದೆ. ಈ ನಾಯಿಯ ಪ್ರೀತಿ ನೋಡಿ ಅಂತ್ಯಕ್ರಿಯೆಗೆ ಬಂದಿದ್ದ ಸ್ಥಳೀಯರು ಕೂಡ ಕಣ್ಣೀರು ಹಾಕಿರುವ ಹೃದಯ ವಿದ್ರಾವಹಕ ಘಟನೆ ನಡೆದಿದೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ