ಸಂಚಲನ ಮೂಡಿಸಿದ ಬಿಸಿ ಪಾಟೀಲ್ ಭೇಟಿ, ಹಾವೇರಿಯಲ್ಲಿ ಕಾಂಗ್ರೆಸ್‍ಗೆ ರಿವರ್ಸ್ ಆಪರೇಷನ್ ಭೀತಿ

ಬಿಸಿ ಪಾಟೀಲ್​ ಮಣಿಸಲು ಬಿಜೆಪಿಯ ಮಾಜಿ ಶಾಸಕನ್ನನ್ನು ಕಾಂಗ್ರೆಸ್ ಆಪರೇಷ್ ಹಸ್ತ ಮಾಡಿದೆ. ಇದೀಗ ಬಿಜೆಪಿ ರಿವರ್ಸ್​ ಆಪರೇಷನ್​​ಗೆ ಮುಂದಾಗಿದೆ.

ಸಂಚಲನ ಮೂಡಿಸಿದ ಬಿಸಿ ಪಾಟೀಲ್ ಭೇಟಿ, ಹಾವೇರಿಯಲ್ಲಿ ಕಾಂಗ್ರೆಸ್‍ಗೆ ರಿವರ್ಸ್ ಆಪರೇಷನ್ ಭೀತಿ
ಬನ್ನಿಕೋಡ ನಿವಾಸಕ್ಕೆ ಬಿ.ಸಿ.ಪಾಟೀಲ್​​​ ಭೇಟಿ
Follow us
|

Updated on: Apr 02, 2023 | 7:38 PM

ಹಾವೇರಿ: ರಾಜ್ಯದಲ್ಲಿ ಅಧಿಕಾರದ ಗದ್ದುಗೆ ಏರಲು ಕಸರತ್ತು ನಡೆಸಿರುವ ಕಾಂಗ್ರೆಸ್‍ಗೆ ರಿವರ್ಸ್ ಆಪರೇಷನ್ ಭೀತಿ ಎದುರಾಗಿದೆ. ಮಾಜಿ ಶಾಸಕ ಬಿ.ಹೆಚ್​​.ಬನ್ನಿಕೋಡಗೆ ಬಿಪಿಪಿ ಗಾಳ ಹಾಕಿದೆ. ಬಣಕಾರ್​ಗೆ ಹಿರೇಕೆರೂರು ಕಾಂಗ್ರೆಸ್​ ಟಿಕೆಟ್​ ಘೋಷಣೆಯಾದ ಬೆನ್ನಲ್ಲೇ ಬೆನ್ನಲ್ಲೇ ಅಸಮಾಧಾನಗೊಂಡಿರುವ ಬನ್ನಿಕೋಡ ಅಸಮಾಧಾನಗೊಂಡಿದ್ದಾರೆ. ಹೀಗಾಗಿ ಬನ್ನಿಕೋಡ ಅವರನ್ನು ಬಿಜೆಪಿಗೆ ಕರೆತರಲು ಬಿ.ಸಿ.ಪಾಟೀಲ್​ ಕಸರತ್ತು ನಡೆಸಿದ್ದಾರೆ. ಇದಕ್ಕೆ ಪೂಕರವೆಂಬಂತೆ ಇಂದು(ಏಪ್ರಿಲ್ 02) ಸಚಿವ ಬಿ.ಸಿ.ಪಾಟೀಲ್​​​ ಅವರು ಬನ್ನಿಕೋಡ ನಿವಾಸಕ್ಕೆ ಭೇಟಿ ನೀಡಿ ಬಿಜೆಪಿಗೆ ಬರುವಂತೆ ಆಹ್ವಾನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್​ಗೆ ರಿವರ್ಸ್​ ಬೀತಿ ಶುರುವಾಗಿದೆ.

ಉಪ ಚುನಾವಣೆಯಲ್ಲಿ ಬಿ.ಸಿ.ಪಾಟೀಲ್ ವಿರುದ್ಧ ಕಾಂಗ್ರೆಸ್​​ನಿಂದ ಬನ್ನಿಕೋಡ ಸ್ಪರ್ಧಿಸಿ ಸೋಲುಕಂಡಿದ್ದರು. ಈ ಬಾರಿ ಸಹ ಕಾಂಗ್ರೆಸ್​ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದ್ರೆ, ಬಿಜೆಪಿಯ ಮಾಜಿ ಶಾಸಕ ಯು.ಬಿ.ಬಣಕಾರ್​ ಅವರನ್ನು ಪಕ್ಷಕ್ಕೆ ಕರೆತಂದು ಅವರಿಗೆ ಟಿಕೆಟ್​ ನೀಡಲಾಗಿದೆ. ಇದರಿಂದ ಬನ್ನಿಕೋಡ ಅಸಮಾಧಾನಗೊಂಡಿದ್ದಾರೆ. ಇದನ್ನೇ ಅಸ್ತ್ರವನ್ನಾಗಿ ಮಾಡಿಕೊಂಡ ಬಿಸಿ ಪಾಟೀಲ್, ಬನ್ನಿಕೊಡ ಸಹಕಾರಕ್ಕಾಗಿ ಮನೆಗೆ ಭೇಟಿ ಆಗಿದ್ದಾಗಿ ಬಿಸಿ ಪಾಟೀಲ್​ ಫೆಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ ಕ್ಷೇತ್ರದ ಅಭಿವೃದ್ದಿಗಾಗಿ ನಮ್ಮ ಜೊತೆ ಕೈ ಜೊಡಿಸಬೇಕೆಂದು ಹೇಳುವ ಮೂಲಕ ಬಿಜೆಪಿಗೆ ಆಹ್ವಾನಿಸಿದ್ದಾರೆ.

ಇನ್ನು ಬಿ.ಎಚ್ ಬನ್ನಿಕೊಡ ಪುತ್ರ ಪ್ರಕಾಶ್ ಬನ್ನಿಕೊಡ ಟಿವಿ9ಗೆ ಪ್ರತಿಕ್ರಿಯಿಸಿದ್ದು, ಮೂರು ಪಕ್ಷದವರು ನಮಗೆ ಭೇಟಿ ಆಗಿ ಬೆಂಬಲ ಕೇಳಿದ್ದಾರೆ. ಆದ್ರೆ ನಾವು ಯಾರ ಜೊತೆಗೂ ಹೊಗಬಾರದೆಂದು ಡಿಸೈಡ್ ಮಾಡಿದ್ದೇವೆ. ಈ ಹಿಂದೆ ಸಕ್ಕರೆ ಕಾರ್ಖಾನೆ ಪ್ರಾರಂಭಿಸಲು ಬಣಕಾರ ವಿರೋಧ ಮಾಡಿದ್ದರು. ಅದಕ್ಕಾಗಿ ನೀವೂ ಯಾರಿಗೂ ಬೆಂಬಲ ಕೊಡಬೇಡಿ ಎಂದು ಜನ ಹೇಳಿದ್ದಾರೆ. ನಾವೇ ಹಣ ಸಂಗ್ರಹ ಮಾಡಿ ನಿಮ್ಮ ಚುನಾವಣೆ ಮಾಡುತ್ತೇವೆ ಎಂದು ಜನ ಹೇಳಿದ್ದಾರೆ. ಸದ್ಯ ಮಾನಸಿಕವಾಗಿ ಬಂಡಾಯವಾಗಿ ಸ್ಪರ್ಧೆ ಮಾಡಲು ತಿರ್ಮಾನ ಮಾಡಿದ್ದೇವೆ. ಎಪ್ರೀಲ್ 5 ರಂದು ಬೆಂಬಲಿಗರ ಸಭೆ ಕರೆದು ಅಧಿಕೃವಾಗಿ ಘೋಷಣೆ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್