ಚುನಾವಣಾ ರಾಜಕೀಯದಿಂದ ನಿವೃತ್ತಿ ಹೊಂದುವ ಮಾತಗಳನ್ನು ಆಡಿದ ಸೋಮಣ್ಣ

Updated By: ವಿವೇಕ ಬಿರಾದಾರ

Updated on: Aug 23, 2025 | 10:01 PM

ಕೇಂದ್ರ ಸಚಿವ ವಿ. ಸೋಮಣ್ಣ ಅವರು ತಮ್ಮ ನಿವೃತ್ತಿಯ ಬಗ್ಗೆ ಘೋಷಣೆ ಮಾಡಿದ್ದಾರೆ. ತುಮಕೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತುಮಕೂರು-ಬೆಂಗಳೂರು ನಾಲ್ಕು ಪಥದ ರೈಲು ಮಾರ್ಗದ ಸರ್ವೆ ಪೂರ್ಣಗೊಂಡಿದ್ದು, DPR ಕಾರ್ಯ ಆರಂಭಿಸಲಾಗಿದೆ ಎಂದು ತಿಳಿಸಿದ್ದಾರೆ. ಅವರು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದೂ ಹೇಳಿದ್ದಾರೆ.

ತುಮಕೂರು, ಆಗಸ್ಟ್​ 23: ಕೇಂದ್ರ ಸಚಿವ ವಿ.ಸೋಮಣ್ಣ ಅವರು ಚುನಾವಣಾ ರಾಜಕೀಯದಿಂದ ನಿವೃತ್ತಿ ಹೊಂದುವ ಮಾತುಗಳನ್ನು ಆಡಿದ್ದಾರೆ. “ದೇವರೇ ಬಂದು ಮತ್ತೆ ಚುನಾವಣೆಗೆ ನಿಲ್ಲು ಅಂದ್ರೂ ಕೇಳಲ್ಲ. ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ನಡೆಸಿ ಮಾತನಾಡಿದ ಅವರು, ತುಮಕೂರು-ಬೆಂಗಳೂರು ನಾಲ್ಕು ಪಥದ ರೈಲ್ವೆ ಮಾರ್ಗಕ್ಕೆ ಸರ್ವೆ ಆಯ್ತು, DPR ಶುರು ಮಾಡಿಸಿದ್ದೇನೆ. ಇನ್ನೊಂದು ಐವತ್ತು ವರ್ಷಕ್ಕೆ ತೊಂದರೆಯಾಗಬಾರದು. ನಾನು ಇನ್ನು 50 ವರ್ಷ ಇರ್ತೀನೇನಪ್ಪ? ದೇವರೇ ಬಂದು ಮತ್ತೆ ಚುನಾವಣೆಗೆ ನಿಲ್ಲು ಅಂದ್ರೂ ಕೇಳಲ್ಲ. ನನ್ನ ಭಾವನೆ ಹಾಗಿದೆ ಎಂದು ನಿವೃತ್ತಿಯ ಮಾತುಗಳನ್ನು ಆಡಿದ್ದಾರೆ.