ಇದು ಯಾವುದೇ ಸಿನಿಮಾದ ಸ್ಟಂಟ್ ಅಲ್ಲ, ಬ್ರೆಜಿಲ್ನಲ್ಲಿ ಸಂಭವಿಸಿದ ಕಾರು ಅಪಘಾತದ ಭಯಾನಕ ವಿಡಿಯೋ
ಬ್ರೆಜಿಲ್‌ನ ಸಾವೊ ಪಾಲೊದ ಜಾರ್ಡಿಮ್ ಅಪೂರದಲ್ಲಿ ಕಾರು ವೇಗವಾಗಿ ಬಂದು ರಸ್ತೆಯಿಂದ ಕೆಳಗೆ ಹಾರಿ ಮೆಟ್ಟಿಲುಗಳಿಗೆ ಡಿಕ್ಕಿ ಹೊಡೆದು ಬಿದ್ದಿರುವ ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಬೆಳಗ್ಗೆ 5.30ರ ಸುಮಾರಿಗೆ ಘಟನೆ ನಡೆದಿದೆ.8 ವರ್ಷದ ರೈಲ್ಸನ್ ಸೌಜಾ ಚಾಲನೆ ಮಾಡುವಾಗ ಹಠಾತ್ ತಲೆನೋವಿನಿಂದಾಗಿ ನಿಯಂತ್ರಣ ಕಳೆದುಕೊಂಡಿದ್ದರು.ಇಷ್ಟು ದೊಡ್ಡ ಅಪಘಾತ ಸಂಭವಿಸಿದರೂ ಅದೃಷ್ಟವಶಾತ್ ಸಣ್ಣ ಪುಟ್ಟ ಗಾಯಗಳಾಗಿದ್ದು ಅವರು ಬಚಾವಾಗಿದ್ದಾರೆ.
ಸಾವೊ ಪಾಲೋ, ನವೆಂಬರ್ 12: ಬ್ರೆಜಿಲ್‌ನ ಸಾವೊ ಪಾಲೊದ ಜಾರ್ಡಿಮ್ ಅಪೂರದಲ್ಲಿ ಕಾರು ವೇಗವಾಗಿ ಬಂದು ರಸ್ತೆಯಿಂದ ಕೆಳಗೆ ಹಾರಿ ಮೆಟ್ಟಿಲುಗಳಿಗೆ ಡಿಕ್ಕಿ ಹೊಡೆದು ಬಿದ್ದಿರುವ ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಬೆಳಗ್ಗೆ 5.30ರ ಸುಮಾರಿಗೆ ಘಟನೆ ನಡೆದಿದೆ.8 ವರ್ಷದ ರೈಲ್ಸನ್ ಸೌಜಾ ಚಾಲನೆ ಮಾಡುವಾಗ ಹಠಾತ್ ತಲೆನೋವಿನಿಂದಾಗಿ ನಿಯಂತ್ರಣ ಕಳೆದುಕೊಂಡಿದ್ದರು.ಇಷ್ಟು ದೊಡ್ಡ ಅಪಘಾತ ಸಂಭವಿಸಿದರೂ ಅದೃಷ್ಟವಶಾತ್ ಸಣ್ಣ ಪುಟ್ಟ ಗಾಯಗಳಾಗಿದ್ದು ಅವರು ಬಚಾವಾಗಿದ್ದಾರೆ. ಕಾರು ವೇಗವಾಗಿ ತಿರುವು ಪಡೆದು, ರಸ್ತೆಯಿಂದ ಹೊರಕ್ಕೆ ತಿರುಗಿ, ಲೋಹದ ಬೇಲಿಗಳನ್ನು ಡಿಕ್ಕಿ ಹೊಡೆದು ಕೆಳಗೆ ಬೀಳುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.ಅವರಿಗೆ ರಕ್ತದೊತ್ತಡವಿತ್ತು, ಔಷಧಿ ತೆಗೆದುಕೊಳ್ಳಲು ಮರೆತಿದ್ದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Nov 12, 2025 07:12 AM