36 ವರ್ಷಗಳ ಬಳಿಕ ರೋಚಕ ಜಯ ಸಾಧಿಸಿದ ಪಾಕಿಸ್ತಾನ್
Pakistan vs Sri Lanka, 1st ODI: 300 ರನ್ಗಳ ಕಠಿಣ ಗುರಿ ಪಡೆದ ಶ್ರೀಲಂಕಾ ತಂಡವು 50 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 293 ರನ್ಗಳಿಸಲಷ್ಟೇ ಶಕ್ತರಾಗಿದ್ದಾರೆ. ಈ ಮೂಲಕ ಪಾಕಿಸ್ತಾನ್ ತಂಡವು 6 ರನ್ಗಳ ರೋಚಕ ಜಯ ಸಾಧಿಸಿದೆ. ಇದು ಕಳೆದ 36 ವರ್ಷಗಳಲ್ಲಿ ಶ್ರೀಲಂಕಾ ವಿರುದ್ಧ ಪಾಕಿಸ್ತಾನ್ ತಂಡ ಸಾಧಿಸಿದ ರೋಚಕ ಗೆಲುವು.
ರಾವಲ್ಪಿಂಡಿಯಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಪಾಕಿಸ್ತಾನ್ ತಂಡ ರೋಚಕ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ತಂಡವು ಪಾಕ್ ಪಡೆಯನ್ನು ಮೊದಲು ಬ್ಯಾಟಿಂಗ್ಗೆ ಆಹ್ವಾನಿಸಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ತಂಡವವು 50 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 299 ರನ್ ಕಲೆಹಾಕಿತು.
300 ರನ್ಗಳ ಕಠಿಣ ಗುರಿ ಪಡೆದ ಶ್ರೀಲಂಕಾ ತಂಡವು 50 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 293 ರನ್ಗಳಿಸಲಷ್ಟೇ ಶಕ್ತರಾಗಿದ್ದಾರೆ. ಈ ಮೂಲಕ ಪಾಕಿಸ್ತಾನ್ ತಂಡವು 6 ರನ್ಗಳ ರೋಚಕ ಜಯ ಸಾಧಿಸಿದೆ. ಇದು ಕಳೆದ 36 ವರ್ಷಗಳಲ್ಲಿ ಶ್ರೀಲಂಕಾ ವಿರುದ್ಧ ಪಾಕಿಸ್ತಾನ್ ತಂಡ ಸಾಧಿಸಿದ ರೋಚಕ ಗೆಲುವು.
1989 ರಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ಪಾಕಿಸ್ತಾನ್ ತಂಡವು 6 ರನ್ಗಳ ರೋಚಕ ಗೆಲುವು ದಾಖಲಿಸಿತ್ತು. ಇದಾದ ಬಳಿಕ ಲಂಕಾ ವಿರುದ್ಧ ಹಲವು ಪಂದ್ಯಗಳನ್ನು ಗೆದ್ದುಕೊಂಡರೂ, ರೋಚಕ ಗೆಲುವು ದಕ್ಕಿಸಿಕೊಳ್ಳಲು ಪಾಕ್ ಪಡೆಗೆ ಸಾಧ್ಯವಾಗಿಯೇ ಇರಲಿಲ್ಲ. ಇದೀಗ 36 ವರ್ಷಗಳ ಬಳಿಕ ಮತ್ತೊಮ್ಮೆ 6 ರನ್ಗಳಿಂದ ಪಾಕಿಸ್ತಾನ್ ತಂಡ ಶ್ರೀಲಂಕಾ ವಿರುದ್ಧ ಏಕದಿನ ಪಂದ್ಯವನ್ನು ಗೆದ್ದುಕೊಂಡಿದೆ.
ಬೆಂಗಳೂರಿನಲ್ಲಿ ಕುರಿ ಮಾರಾಟ ಮಾಡ್ತಿದ್ದವನ ಬಳಿ ಪಿಸ್ತೂಲ್!
ಮಲ್ಲಿಕಾರ್ಜುನ ಮುತ್ಯಾ ಪರ ಭಕ್ತರ ಸಭೆ, ಜಿಲ್ಲಾಡಳಿತಕ್ಕೆ 2 ದಿನ ಡೆಡ್ಲೈನ್
ಜನಾರ್ದನ ರೆಡ್ಡಿಗೆ ಮತ್ತೆ 'ಗಣಿ' ಉರುಳು? 884 ಕೋಟಿ ನಷ್ಟ ವಸೂಲಿಗೆ ಆಗ್ರಹ
ತಾನು ಕೆಲಸ ಮಾಡಿದ ಆಫೀಸಿಗೇ 91 ಲಕ್ಷ ರೂ. ಕನ್ನ! ಆರೋಪಿ ಕ್ಯಾಶಿಯರ್ ಅಂದರ್

