ಎಂತೆಂಥಾ ಜನ ಇರ್ತಾರೆ ನೋಡಿ..,ಟೊಮೆಟೊ ಬೆಳೆಗೆ ವಿಷಹಾಕಿದ ದುಷ್ಕರ್ಮಿಗಳು

Updated on: Feb 04, 2025 | 3:24 PM

ಎಂತೆಂಥಾ ಜನ ಇರ್ತಾರೆ ನೋಡಿ..ಕೆಲ ದಿನಗಳಲ್ಲೇ ಕೈಗೆ ಬರಬೇಕಿದ್ದ ಟೊನೆಟೊ ಬೆಳೆಯನ್ನು ಸಂಪೂರ್ಣವಾಗಿ ನಾಶ ಮಾಡಿದ್ದಾರೆ. ಇನ್ನೇನು ಕೈಗೆ ಬರಬೇಕಿದ್ದ ಟೊಮೆಟೊ ಬೆಳಗೆ ದುರ್ಷಮಿಗಳು ಕಳೆನಾಶಕ ಸಿಂಪಡಿಸಿ ನಾಶಪಡಿಸಿದ್ದಾರೆ. ಮಂಡ್ಯ ಜಿಲ್ಲೆ ಕೆ.ಆರ್​.ಪೇಟೆ ತಾಲೂಕಿನ ಮೊಸಳೆಕೊಪ್ಪಲು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಕೈಗೆ ಬಂದ ಫಲಸ ನಾಶಪಡಿಸಿದ್ದಕ್ಕೆ ರೈತ ಕಂಗಾಲಾಗಿದ್ದಾನೆ.

ಮಂಡ್ಯ, (ಫೆಬ್ರವರಿ 04): ಕೆಲ ದಿನಗಳಲ್ಲಿ ಕೈಗೆ ಬರಬೇಕಿದ್ದ ಟೊಮೆಟೊ ಬೆಳೆಗೆ ಕಳೆನಾಶಕ ಸಿಂಪಡಿಸಿ ಸಂಪೂರ್ಣವಾಗಿ ನಾಶ ಮಾಡಿರುವ ಘಟನೆ ಮಂಡ್ಯ ಜಿಲ್ಲೆ ಕೆ.ಆರ್​.ಪೇಟೆ ತಾಲೂಕಿನ ಮೊಸಳೆಕೊಪ್ಪಲು ಗ್ರಾಮದಲ್ಲಿ ನಡೆದಿದೆ. ರೈತ ಸಂತೋಷ್​​​​​​ ಎನ್ನುವರು ಒಂದು ಎಕರೆಯಲ್ಲಿ ಟೊಮೆಟೊ ಬೆಳೆದಿದ್ದರು, ಇನ್ನೇನು ಕೆಲವೇ ದಿನಗಳಲ್ಲಿ ಟೊಮೆಟೊ ಫಸಲ ಕೈಗೆ ಬರಬೇಕಿತ್ತು. ಆದರೆ, ಯಾರೋ ದುಷ್ಕರ್ಮಿಗಳು, ಕಳೆನಾಶಕ ಸಿಂಪಡಿಸಿ ಟೊಮೆಟೊ ಬೆಳೆಯನ್ನು ಸಂಪೂರ್ಣವಾಗಿ ನಾಶ ಮಾಡಿ ವಿಕೃತಿ ಮೆರೆದಿದ್ದಾರೆ. ಲಕ್ಷಾಂತರ ರೂ ಬೆಳೆ ನಾಶವಾಗಿದ್ದಕ್ಕೆ ರೈತ ಸಂತೋಷ್​​​​​​ ಕಂಗಾಲಾಗಿದ್ದಾರೆ.

Loading...
Unable to load recommendations.
Follow Us
ರಮೇಶ್ ಬಿ. ಜವಳಗೇರಾ

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More