ಯಲ್ಲಮ್ಮ ದೇಗುಲದ ಗೋಡೆ ಮೇಲೆ ಅಶ್ಲೀಲ ಚಿಹ್ನೆ ಬಿಡಿಸಿ ವಿಕೃತಿ ಮೆರೆದ ದುಷ್ಕರ್ಮಿಗಳು
ಶಿವಮೊಗ್ಗದ ಅಶೋಕ ರಸ್ತೆಯ ಬೇಡರ ಬೀದಿಯಲ್ಲಿರುವ ಯಲ್ಲಮ್ಮನ ದೇಗುಲದ ಗೋಡೆ ಮೇಲೆ ಕಿಡಿಗೇಡಿಗಳಯ ಅಸಭ್ಯ ಚಿಹ್ನೆ ಬಿಡಿಸಿ ವಿಕೃತಿ ಮರೆದಿದ್ದಾರೆ. ದೇವಸ್ಥಾನದ ಗೋಡೆಯ ಮೇಲೆ ಮಧ್ಯದ ಬೆರಳು ತೋರಿಸುವ ಚಿಹ್ನೆ ಬಿಡಿಸಿದ್ದು, ಈ ಅಸಭ್ಯ ಚಿಹ್ನೆ ಬರೆದಿರುವವರ ವಿರುದ್ಧ ಸ್ಥಳೀಯರು ಆಕ್ರೋಶಗೊಂಡಿದ್ದಾರೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಕಿಡಿಗೇಡಿಗಳ ಕೃತ್ಯವನ್ನು ದೇವಸ್ಥಾನ ಸಮಿತಿ ಖಂಡಿಸಿದ್ದು, ಕಿಡಿಗೇಡಿಗಳ ಬಂಧನಕ್ಕೆ ಒತ್ತಾಯಿಸಿದೆ.
ಶಿವಮೊಗ್ಗ, ನವೆಂಬರ್ 17: ಶಿವಮೊಗ್ಗದ ಅಶೋಕ ರಸ್ತೆಯ ಬೇಡರ ಬೀದಿಯಲ್ಲಿರುವ ಯಲ್ಲಮ್ಮನ ದೇಗುಲದ ಗೋಡೆ ಮೇಲೆ ಕಿಡಿಗೇಡಿಗಳಯ ಅಸಭ್ಯ ಚಿಹ್ನೆ ಬಿಡಿಸಿ ವಿಕೃತಿ ಮರೆದಿದ್ದಾರೆ. ದೇವಸ್ಥಾನದ ಗೋಡೆಯ ಮೇಲೆ ಮಧ್ಯದ ಬೆರಳು ತೋರಿಸುವ ಚಿಹ್ನೆ ಬಿಡಿಸಿದ್ದು, ಈ ಅಸಭ್ಯ ಚಿಹ್ನೆ ಬರೆದಿರುವವರ ವಿರುದ್ಧ ಸ್ಥಳೀಯರು ಆಕ್ರೋಶಗೊಂಡಿದ್ದಾರೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಕಿಡಿಗೇಡಿಗಳ ಕೃತ್ಯವನ್ನು ದೇವಸ್ಥಾನ ಸಮಿತಿ ಖಂಡಿಸಿದ್ದು, ಕಿಡಿಗೇಡಿಗಳ ಬಂಧನಕ್ಕೆ ಒತ್ತಾಯಿಸಿದೆ.
ದೇವಸ್ಥಾನದ ಗೌರವಕ್ಕೆ ಧಕ್ಕೆ ತರುವ ರೀತಿಯಲ್ಲಿ ವರ್ತಿಸಿರುವ ಕಿಡಿಗೇಡಿಗಳನ್ನು ಶೀಘ್ರ ಪತ್ತೆಹಚ್ಚಿ, ಈ ವಿಕೃತ ಕೃತ್ಯದ ಹಿಂದೆ ಯಾರ ಕೈವಾಡವಿದೆ ಎಂಬುದರ ಬಗ್ಗೆ ಸೂಕ್ತ ತನಿಖೆಗೆ ಆಗಬೇಕೆಂದು ಆಗ್ರಹಿಸಿದೆ. ಅಲ್ಲದೇ ಧಾರ್ಮಿಕ ಕೇಂದ್ರಗಳ ಮೇಲೆ ಇಂತಹ ಕೃತ್ಯ ಮರುಕಳಿಸದಂತೆ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಮಿತಿ ಆಗ್ರಹಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us
