ಹೊನ್ನಾಳಿಯಲ್ಲಿ ವೀರ ಸಾವರ್ಕರ್ ಅವರ ಭಾವಚಿತ್ರವಿದ್ದ ಫ್ಲೆಕ್ಸ್ ಗಳಿಗೆ ಕಿಡಿಗೇಡಿಗಳು ಬ್ಲೇಡ್ ಹಾಕಿದ್ದಾ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 01, 2022 | 12:03 PM

ಹೊನ್ನಾಳಿ ಬಿಜೆಪಿ ಶಾಸಕ ಎಮ್ ಪಿ ರೇಣುಕಾಚಾರ್ಯ ಮತ್ತು ವೀರ ಸಾವರ್ಕರ್ ಅವರ ಫೋಟೋಗಳನ್ನೊಳಗೊಂಡ ಫ್ಲೆಕ್ಸ್ ಗಳಿಗೆ ಕೆಲ ಕಿಡಿಗೇಡಿಗಳು ಬ್ಲೇಡ್ ಹಾಕಿದ್ದಾರೆ.

ದಾವಣಗೆರೆ: ಕೆಲವರಲ್ಲಿ ಸಮುದಾಯಗಳ ನಡುವೆ ದ್ವೇಷ ಹುಟ್ಟಿಸುವ ಪ್ರವೃತ್ತಿ ನಿಲ್ಲುವಂತೆ ಕಾಣುತ್ತಿಲ್ಲ ಮಾರಾಯ್ರೇ! ಹೊನ್ನಾಳಿಯಲ್ಲಿ (Honnali) ಹಿಂದೂ ಮಹಾಗೌರಿ ಗಣಪತಿ ಪ್ರತಿಷ್ಠಾಪನೆ ಅಂಗವಾಗಿ ಪಟ್ಟಣದ ಸುತ್ತ ಮುತ್ತ ಹಾಕಲಾಗಿದ್ದ ಹೊನ್ನಾಳಿ ಬಿಜೆಪಿ ಶಾಸಕ ಎಮ್ ಪಿ ರೇಣುಕಾಚಾರ್ಯ (MP Renukacharya) ಮತ್ತು ವೀರ ಸಾವರ್ಕರ್ (Veer Savarkar) ಅವರ ಫೋಟೋಗಳನ್ನೊಳಗೊಂಡ ಫ್ಲೆಕ್ಸ್ ಗಳಿಗೆ ಕೆಲ ಕಿಡಿಗೇಡಿಗಳು ಬ್ಲೇಡ್ ಹಾಕಿದ್ದಾರೆ. ಸಮುದಾಯಗಳ ನಡುವಿನ ಶಾಂತಿ ಸೌಹಾರ್ದತೆ ಕದಡುವ ಪ್ರಯತ್ನವಿದು.