Sini Shetty: ಮಿಸ್​ ಇಂಡಿಯಾ ಸುಂದರಿ ಸಿನಿ ಶೆಟ್ಟಿ ಬಂದು ಪೋಸ್​ ಕೊಟ್ಟರೂ ಡೋಂಟ್​ ಕೇರ್​ ಎಂದ ಬಾಲಕ

| Updated By: Digi Tech Desk

Updated on: Jul 19, 2022 | 9:54 AM

Sini Shetty: ಕರಾವಳಿ ಬೆಡಗಿ ಸಿನಿ ಶೆಟ್ಟಿ ಅವರು ಮಂಗಳೂರಿಗೆ ಬಂದಿದ್ದಾರೆ. ವಿಮಾನ ನಿಲ್ದಾಣದಲ್ಲಿ ಅವರು ಬಾಲಕನೊಬ್ಬನ ಜೊತೆ ಕೆಲ ಕ್ಷಣಗಳನ್ನು ಕಳೆದಿದ್ದಾರೆ.

ಮಾಡೆಲ್​ ಸಿನಿ ಶೆಟ್ಟಿ (Miss India Sini Shetty) ಅವರು ಈಗ ದೇಶಾದ್ಯಂತ ಖ್ಯಾತಿ ಪಡೆದುಕೊಂಡಿದ್ದಾರೆ. ‘ಮಿಸ್​ ಇಂಡಿಯಾ 2022’ (Miss India 2022)  ಕಿರೀಟ ಮುಡಿಗೇರಿಸಿಕೊಂಡಿರುವ ಅವರು ಇತ್ತೀಚೆಗೆ ಮಂಗಳೂರಿಗೆ (Mangalore) ಭೇಟಿ ನೀಡಿದರು. ಈ ವೇಳೆ ಅವರಿಗೆ ಭರ್ಜರಿ ಸ್ವಾಗತ ನೀಡಲಾಯಿತು. ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಲಕನೊಬ್ಬನನ್ನು ಕಂಡು ಅವರು ಖುಷಿಪಟ್ಟರು. ಆತನ ಜೊತೆ ಪೋಸ್​ ಕೊಡಲು ಮುಂದಾದರು. ಆದರೆ ಆ ಬಾಲಕ ತಪ್ಪಿಸಿಕೊಂಡು ಓಡಲು ಪ್ರಯತ್ನಿಸಿದ. ಕ್ಯಾಮೆರಾ ಕಣ್ಣಲ್ಲಿ ಈ ಮುದ್ದಾದ ಕ್ಷಣಗಳು ಸೆರೆಯಾಗಿವೆ.

Published On - 9:27 am, Tue, 19 July 22

Follow us on