ಪಂಜಾಬ್ ಗಡಿ ಭಾಗದಲ್ಲಿ ಬಿದ್ದಿರುವ ಪಾಕಿಸ್ತಾನದ ಕ್ಷಿಪಣಿ ಇನ್ನೂ ಜೀವಂತ, ನಿಷ್ಕ್ರಿಯಗೊಳಿಸುವ ಕಾರ್ಯದಲ್ಲಿ ಪರಿಣಿತರು

Updated on: May 08, 2025 | 5:54 PM

ಕ್ಷಿಪಣಿ ಸ್ಫೋಟಗೊಂಡರೆ ಯಾವುದೇ ರೀತಿಯ ಅನಾಹುತ ಅಗದಿರಲೆಂದು ಅಲ್ಲಿನ ನಿವಾಸಿಗಳನ್ನು ಸುಮಾರು ಒಂದು ಕಿಮೀನಷ್ಟು ದೂರ ಕಳಿಸಲಾಗಿದೆ. ಅಸಲಿಗೆ ಜೀವಂತವಾಗಿದ್ದ ಕ್ಷಿಪಣಿಯನ್ನು ಸ್ಥಳೀಯರು ಗಮನಿಸಿ ಸೇನಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ, ಕೂಡಲೇ ಸ್ಥಳಕ್ಕೆ ಧಾವಿಸಿರುವ ಅಧಿಕಾರಿಗಳು ಅದನ್ನು ನಿಷ್ಕ್ರಿಯಗೊಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಪಾಕಿಸ್ತಾನ ಇಂಥ ಹುಚ್ಚಾಟಗಳಿಗೆ ಕೈ ಹಾಕದಿರುವುದು ಲೇಸು.

ಅಮೃತಸರ (ಪಂಜಾಬ್), ಮೇ 8: ಪಾಕಿಸ್ತಾನ ತನ್ನ ದುಷ್ಕೃತ್ಯಗಳನ್ನು ನಿಲ್ಲಿಸವುದಿಲ್ಲ ಎಂದು ನಾವು ಪದೇಪದೆ ಹೇಳುತ್ತಿದ್ದೇವೆ. ನಿನ್ನೆ ರಾತ್ರಿ ಅದು ಭಾರತದ 15 ನಗರಗಳ ಮೇಲೆ ಕ್ಷಿಪಣಿ ದಾಳಿ (missile attack) ನಡೆಸಿತ್ತಾದರೂ, ಭಾರತೀಯ ಸೇನೆ ಎಸ್-400 ಸುದರ್ಶನ ಚಕ್ರ ಏರ್ ಡಿಫೆನ್ಸ್ ಸಿಸ್ಟಮ್ ಮೂಲಕ ಭಾರತದತ್ತ ಸಿಡಿದ ಎಲ್ಲ ಕ್ಷಿಪಣಿಗಳನ್ನು ನಿಷ್ಕ್ರಿಯಗೊಳಿಸಿದೆ ಇಲ್ಲವೇ ನಾಶ ಮಾಡಿದೆ. ಅದರೆ ಅದ್ಹೇಗೋ ಪಂಜಾಬ್ ಗಡಿಭಾಗದಲ್ಲಿ ಬಿದ್ದ ಕ್ಷಿಪಣಿಯೊಂದು ಸಂಪೂರ್ಣವಾಗಿ ನಿಷ್ಕ್ರಿಯಗೊಂಡಿಲ್ಲ. ಟಿವಿ9 ಹಿಂದಿ ನೆಟ್ವರ್ಕ್ ವರದಿಗಾರ ಮಿಸೈಲ್ ಬಿದ್ದಿರುವ ಸ್ಥಳದಿಂದ ವರದಿ ಮಾಡಿದ್ದಾರೆ. ವಾಯುಸೇನೆ ಮತ್ತು ಭೂಸೇನೆಯ ಪರಿಣಿತರು ಕ್ಷಿಪಣಿಯನ್ನು ನಿಷ್ಕ್ರಿಯಗೊಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ ಮತ್ತು ಆ ಕೆಲಸಕ್ಕೆ ಇನ್ನೂ ಸ್ವಲ್ಪ ಸಮಯ ಹಿಡಿಯಲಿದೆ ಎಂದು ವರದಿಗಾರ ಹೇಳುತ್ತಾರೆ.

ಇದನ್ನೂ ಓದಿ:  ರಾವಲ್ಪಿಂಡಿ ಕ್ರೀಡಾಂಗಣದ ಮೇಲೆ ಡ್ರೋನ್ ದಾಳಿ; ಪಾಕಿಸ್ತಾನ ಬಿಡಲು ಮುಂದಾದ ವಿದೇಶಿ ಆಟಗಾರರು

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ