ವಿದ್ಯಾರ್ಥಿಗಳ ಜೊತೆ ಕಬ್ಬಡಿ ಆಡುವ ಮೂಲಕ ಕಬಡ್ಡಿ ಪಂದ್ಯಾವಳಿ ಉದ್ಘಾಟಿಸಿದ ಶಾಸಕ ಷಡಕ್ಷರಿ

| Updated By: ಸಾಧು ಶ್ರೀನಾಥ್​

Updated on: Jul 24, 2023 | 7:22 PM

ತಿಪಟೂರಿನ ಸರ್ಕಾರಿ ಕಾಲೇಜಿನಲ್ಲಿ ಇಂದು ಸೋಮವಾರ ಕಬ್ಬಡಿ ಪಂದ್ಯಾವಳಿ ನಡೆಯಿತು. ಶಾಸಕ ಷಡಕ್ಷರಿ ಅವರು ಸ್ವತಃ ಕಬ್ಬಡಿ ಆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ತುಮಕೂರು: ತುಮಕೂರು (Tumkur) ಜಿಲ್ಲೆಯ ತಿಪಟೂರಿನ (Tiptur) ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂದು ಸೋಮವಾರ ಕಬಡ್ಡಿ ಪಂದ್ಯಾವಳಿ (Kabaddi College Tournament ) ನಡೆಯಿತು. ಪುರುಷ ಮತ್ತು ಮಹಿಳೆಯರ ಕಬಡ್ಡಿ ಪಂದ್ಯಾವಳಿಯನ್ನು ಸ್ಥಳೀಯ ಶಾಸಕ (Congress MLA K Shadakshari) ಕೆ ಷಡಕ್ಷರಿ ಉದ್ವಾಟಿಸಿದರು.

ಇದನ್ನೂ ಓದಿ:  ಕೋಟೆನಾಡಿನಲ್ಲಿ ಭರ್ಜರಿ ಕಬಡ್ಡಿ ಪಂದ್ಯಾವಳಿ ಆಯೋಜನೆ; ಅಖಾಡಕ್ಕಿಳಿದು ತೊಡೆತಟ್ಟಿದ ಕಾನೂನು ವಿದ್ಯಾರ್ಥಿಗಳು

ಶಾಸಕ ಷಡಕ್ಷರಿ ಅವರು ಸ್ವತಃ ಕಬಡ್ಡಿ ಆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿದ್ಯಾರ್ಥಿಗಳ ಜೊತೆ ಕಬಡ್ಡಿ ಆಡುವ ಮೂಲಕ ಅವರು ಪಂದ್ಯಾವಳಿಗೆ ಚಾಲನೆ ನೀಡಿದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಪಂದ್ಯಾವಳಿ ಆಯೋಜಿಸಲಾಗಿದ್ದು, ಕಬಡ್ಡಿ ಆಟವನ್ನು ವಿದ್ಯಾರ್ಥಿಗಳು ಮತ್ತು ಕ್ರೀಡಾಭಿಮಾನಿಗಳು ವೀಕ್ಷಿಸಿದರು.

ತಿಪಟೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ