Pradeep Eshwar: ತಂದೆತಾಯಿಗಳ ಬೆವರಿನ ಮೌಲ್ಯ ಅರ್ಥಮಾಡಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಹೇಳಿದ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್
ತಂದೆತಾಯಿಗಳನ್ನು ನೋಯಿಸಿದರೆ ಸುಮ್ಮನಿರುವುದಿಲ್ಲ ಎಂದು ಪ್ರದೀಪ್ ವಿದ್ಯಾರ್ಥಿಗಳನ್ನು ಎಚ್ಚರಿಸಿದರು.
ಚಿಕ್ಕಬಳ್ಳಾಪುರ: ನಗರದ ಸರ್ಕಾರೀ ಕಾಲೇಜೊಂದಕ್ಕೆ ಇಂದು ಮುಖ್ಯ ಆತಿಥಿಯಾಗಿ ಹೋಗಿದ್ದ ಶಾಸಕ ಪ್ರದೀಪ್ ಈಶ್ವರ್ (Pradeep Eshwar) ವಿದ್ಯಾರ್ಥಿಗಳಿಗೆ ಕ್ರಾಂತಿಕಾರಿ ಭಾಷಣಕಾರನೊಬ್ಬನ (revolutionary speaker) ಶೈಲಿಯಲ್ಲಿ ಹಿತವಚನಗಳನ್ನು ನೀಡಿದರು. ಶಾಸಕನಾದ ಮೇಲೆ ಅವರ ಮಾತಾಡುವ ರೀತಿಯಲ್ಲಿ ಬದಲಾವಣೆಯೇನೂ ಇಲ್ಲ. ಹೇಳಬೇಕಿರುವುದನ್ನು ಮುಖಕ್ಕೆ ರಾಚುವ ಹಾಗೆ ಹೇಳುತ್ತಾರೆ. ಮಕ್ಕಳು ವಿದ್ಯಾವಂತರಾಗಲಿ, ಸಮಾಜದಲ್ಲಿ ಒಳ್ಳೇಯ ಹೆಸರು ಗಳಿಸಲಿ ಅತ ಬಿಸಿಲು ಮಳೆಯಲ್ಲಿ ಕಷ್ಟಪಟ್ಟು ದುಡಿದು ಮಕ್ಕಳನ್ನು ಕಾಲೇಜಿಗೆ ಕಳಿಸುವ ತಂದೆತಾಯಿಗಳ ಬೆವರಿನ ಮೌಲ್ಯ ಅರ್ಥಮಾಡಿಕೊಳ್ಳುವಂತೆ ಅವರು ವಿದ್ಯಾರ್ಥಿಗಳಿಗೆ ಹೇಳಿದರು. ಅವರನ್ನು ನೋಯಿಸಿದರೆ ಸುಮ್ಮನಿರುವುದಿಲ್ಲ ಎಂದು ಪ್ರದೀಪ್ ವಿದ್ಯಾರ್ಥಿಗಳನ್ನು ಎಚ್ಚರಿಸಿದರು. ಪರಿಶ್ರಮ ಅಕಾಡೆಮಿಯಲ್ಲಿ (Parishrama Academy) ಪ್ರತಿ ವಿದ್ಯಾರ್ಥಿಯಿಂದ ರೂ. 3.5 ಲಕ್ಷ ಫೀ ತೆಗೆದುಕೊಳ್ಳುವ ತಾನು ಮೊಬೈಲ್ ಪೋನ್ ನಿಷೇಧಿಸಬಹುದಾದರೆ ಎಲ್ಲವನ್ನು ಉಚಿತವಾಗಿ ನೀಡುವ ಸರ್ಕಾರಿ ಕಾಲೇಜುಗಳಲ್ಲಿ ಪೋನ್ ಬಳಕೆ ಯಾಕೆ ನಿಷೇಧಿಸಲಾಗದು ಎಂದು ಕೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ