ಯಾದಗಿರಿ: ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಅಧಿಕಾರಿಗಳ ವಿರುದ್ಧ ದೂರಿದ ಬಾಬುರಾವ್ ಚಿಂಚನಸೂರ್
ಪ್ರಭು ಚೌಹಾನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅವರು ಅಧಿಕಾರಿಗಳನ್ನು ನೇರವಾಗಿ ತರಾಟೆಗೆ ತೆಗೆದುಕೊಳ್ಳುವ ಬದಲು ಅವರ ವಿರುದ್ಧ ದೂರುಗಳನ್ನು ಮೌಖಿಕವಾಗಿ ಸಚಿವರಿಗೆ ಹೇಳಿಕೊಂಡರು.
ಯಾದಗಿರಿ: ಜಿಲ್ಲೆಯ ಪ್ರತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ (KDP meeting) ವಿಧಾನ ಪರಿಷತ್ ಸದಸ್ಯ ಬಾಬುರಾವ್ ಚಿಂಚನಸೂರ್ (Baburao Chinchansur) ಅವರು ವಿವಿಧ ಇಲಾಖೆಗಳ ಅಧಿಕಾರಿಗಳ ವಿರುದ್ದ ಗರಂ ಆಗುತ್ತಾರೆ ಮತ್ತು ಅದು ಅಧಿಕಾರಿಗಳಿಗೂ ವಾಡಿಕೆಯಾದಂತಿದೆ. ಬುಧವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲೂ ಅವರು ಸುಮ್ಮನಿರಲಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚೌಹಾನ್ (Prabhu Chavan) ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅವರು ಅಧಿಕಾರಿಗಳನ್ನು ನೇರವಾಗಿ ತರಾಟೆಗೆ ತೆಗೆದುಕೊಳ್ಳುವ ಬದಲು ಅವರ ವಿರುದ್ಧ ದೂರುಗಳನ್ನು ಮೌಖಿಕವಾಗಿ ಸಚಿವರಿಗೆ ಹೇಳಿಕೊಂಡರು. ಬಾಬುರಾವ್ ದೂರುತ್ತಿರುವುದನ್ನು ವಿಡಿಯೋದಲ್ಲಿ ಕೇಳಿಸಿಕೊಳ್ಳಬಹುದು.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ