ದಮ್ಮಿದ್ರೆ ಶ್ರೀನಿವಾಸ ಗೌಡ ಸ್ಪರ್ಧಿಸಲಿ ಅಂತ ಸವಾಲೆಸೆದರು ವಿಧಾನ ಪರಿಷತ್ ಸದಸ್ಯ ಗೋವಿಂದರಾಜು
ಅಸಲಿಗೆ ಗೋವಿಂದರಾಜು ಅವರು, ಶ್ರೀನಿವಾಸ ಗೌಡ ಗಂಡಸಾಗಿದ್ದರೆ ಕೋಲಾರದಿಂದ ಸ್ಪರ್ಧಿಸಲಿ ಅಂತ ಸವಾಲು ಹಾಕಿದ್ದಾರೆ.
ಕೋಲಾರದ ಶಾಸಕ ಕೆ ಶ್ರೀನಿವಾಸ ಗೌಡ (MLA Srinivas Gowda) ಜೆಡಿ(ಎಸ್) ತೊರೆದು ಕಾಂಗ್ರೆಸ್ ಸೇರಿದ್ದು ಈಗ ಹಳೆಯ ಸುದ್ದಿ. ನಂಬಲರ್ಹ ಮೂಲಗಳ ಪ್ರಕಾರ ಕಾಂಗ್ರೆಸ್ ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ನೀಡಲಿದೆ. ಅವರು ಸ್ಪರ್ಧಿಸಿದರೆ ಯಾವ ಕಾರಣಕ್ಕೂ ಗೆಲ್ಲಲು ಬಿಡುವುದಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಗೋವಿಂದರಾಜು (MLC Govindaraju) ಹೇಳಿದ್ದಾರೆ. ಅಸಲಿಗೆ ಗೋವಿಂದರಾಜು ಅವರು, ಶ್ರೀನಿವಾಸ ಗೌಡ ಗಂಡಸಾಗಿದ್ದರೆ ಕೋಲಾರದಿಂದ ಸ್ಪರ್ಧಿಸಲಿ ಅಂತ ಸವಾಲು ಹಾಕಿದ್ದಾರೆ.