‘ಸಮಾಧಾನಕರ ಉತ್ತರ ಬಂದ್ರೆ ನಾನು ರವಿಚಂದ್ರನ್ ಹೇಳಿದಂತೆ ಕೇಳ್ತೀನಿ’; ಎಂಎನ್ ಕುಮಾರ್
ಎಂಎನ್ ಕುಮಾರ್ ಹಾಗೂ ಸುದೀಪ್ ನಡುವಿನ ಜಟಾಪಟಿ ಹೊಸ ಹೊಸ ಆಯಾಮ ಪಡೆದುಕೊಳ್ಳುತ್ತಿದೆ. ಈಗ ಈ ಪ್ರಕರಣದಲ್ಲಿ ರಾಜಿ ಮಾಡಿಸಲು ಶಿವರಾಜ್ಕುಮಾರ್ ಹಾಗೂ ರವಿಚಂದ್ರನ್ ಅವರ ಎಂಟ್ರಿ ಆಗಿದೆ.
ಎಂಎನ್ ಕುಮಾರ್ ಹಾಗೂ ಸುದೀಪ್ (Sudeep) ನಡುವಿನ ಜಟಾಪಟಿ ಹೊಸ ಹೊಸ ಆಯಾಮ ಪಡೆದುಕೊಳ್ಳುತ್ತಿದೆ. ಸುದೀಪ್ ಅವರು ಈ ಪ್ರಕರಣವನ್ನು ಕೋರ್ಟ್ನಲ್ಲೇ ಬಗೆಹರಿಸಿಕೊಳ್ಳುತ್ತೇನೆ ಎನ್ನುತ್ತಿದ್ದಾರೆ. ಪ್ರಕರಣದ ಇತ್ಯರ್ಥ ಫಿಲ್ಮ್ ಚೇಂಬರ್ನಲ್ಲೇ ಆಗಬೇಕು ಎಂದು ಕುಮಾರ್ ಪಟ್ಟು ಹಿಡಿದಿದ್ದಾರೆ. ಈಗ ಈ ಪ್ರಕರಣದಲ್ಲಿ ರಾಜಿ ಮಾಡಿಸಲು ಶಿವರಾಜ್ಕುಮಾರ್ (Shivarajkumar) ಹಾಗೂ ರವಿಚಂದ್ರನ್ ಅವರ ಎಂಟ್ರಿ ಆಗಿದೆ. ‘ರವಿಚಂದ್ರನ್ ಅವರನ್ನು ನಾನು ಭೇಟಿ ಮಾಡುತ್ತೇನೆ. ಸಮಾಧಾನಕರ ಉತ್ತರ ಬಂದ್ರೆ ನಾನು ರವಿಚಂದ್ರನ್ ಹೇಳಿದಂತೆ ಕೇಳ್ತೀನಿ’ ಎಂದು ಕುಮಾರ್ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos