ಮೊಬೈಲ್ ಫೋನ್ ಸ್ನ್ಯಾಚರೊಬ್ಬನ ಕೈ ಚಳಕ ಸಿಸಿಟಿವಿಯಲ್ಲಿ ಸೆರೆ! ಕಳ್ಳನೀಗ ತನ್ನ ಸಹಚರನೊಂದಿಗೆ ಕೊರಮಂಗಲ ಪೊಲೀಸರ ಅತಿಥಿ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 24, 2022 | 4:31 PM

ಫೋನ್ ಸ್ನ್ಯಾಚರನೊಬ್ಬ ಬೈಕ್ ಓಡಿಸುತ್ತಲೇ ಫೋನಲ್ಲಿ ಮಾತಾಡುತ್ತಿರುವವರಿಗಾಗಿ ಹೊಂಚು ಹಾಕುತ್ತಾನೆ. ಅಂಥ ಒಬ್ಬ ವ್ಯಕ್ತಿ ಕಾಣಿಸಿದ ಕೂಡಲೇ ಬೈಕನ್ನು ಯು-ಟರ್ನ್ ಮಾಡಿಕೊಂಡು ವಾಪಸ್ಸು ಹೋಗುತ್ತಾನೆ.

ಬೆಂಗಳೂರು: ಮೊಬೈಲ್ ಪೋನ್ ಸ್ನ್ಯಾಚರ್ಸ್ ಬಗ್ಗೆ ನೀವು ಕೇಳಿಸಿಕೊಂಡಿರುತ್ತೀರಿ. ಆದರೆ ಕಾರ್ಯವಿಧಾನ, ಕೈಚಳಕ (modus operandi) ಹೇಗಿರುತ್ತದೆ ಅಂತ ಈ ಸಿಸಿಟಿವಿ (CCTV ) ಫುಟೇಜ್ ನಲ್ಲಿ ನೋಡಿ. ಫೋನ್ ಸ್ನ್ಯಾಚರನೊಬ್ಬ (phone snatcher) ಬೈಕ್ ಓಡಿಸುತ್ತಲೇ ಫೋನಲ್ಲಿ ಮಾತಾಡುತ್ತಿರುವವರಿಗಾಗಿ ಹೊಂಚು ಹಾಕುತ್ತಾನೆ. ಅಂಥ ಒಬ್ಬ ವ್ಯಕ್ತಿ ಕಾಣಿಸಿದ ಕೂಡಲೇ ಬೈಕನ್ನು ಯು-ಟರ್ನ್ ಮಾಡಿಕೊಂಡು ವಾಪಸ್ಸು ಹೋಗುತ್ತಾನೆ. ಆ ವ್ಯಕ್ತಿ ಆಗಲೂ ಫೋನಲ್ಲಿ ಮಾತಾಡುತ್ತಿರೋದು ಅವನ ಕೆಲಸವನ್ನು ಮತ್ತಷ್ಟು ಸುಲಭವಾಗಿಸುತ್ತದೆ. ಮಿಂಚಿನ ವೇಗದಲ್ಲಿ ಬಂದು ಕ್ಷಣಾರ್ಧದಲ್ಲಿ ವ್ಯಕ್ತಿಯಿಂದ ಪೋನ್ ಕಸಿದು ಪರಾರಿಯಾಗುತ್ತಾನೆ.

‘ಹೋಯ್ ಹೋಯ್…’ ಅಂತ ವ್ಯಕ್ತಿ ಕಳ್ಳನ ಹಿಂದೆ ಓಡುವುದನ್ನು ನೋಡಬಹುದು. ಇದು ಕೋರಮಂಗಲದಲ್ಲಿ ನಡೆದ ಘಟನೆ. ಸಂತೋಷದ ಸಂಗತಿಯೆಂದರೆ ಕೋರಮಂಗಲ ಪೊಲೀಸರು ಪುಟೇಜಲ್ಲಿ ಕಾಣುವ ಫೋನ್ ಸ್ನ್ಯಾಚರ್ ಸಜ್ಜದ್ ಮತ್ತು ಅವನ ಸಹಚರ ಅರುಣ್ ನನ್ನು ಬಂಧಿಸಿ ಅವರಿಂದ ಒಟ್ಟು ರೂ. 7 ಲಕ್ಷ ಮೌಲ್ಯದ 40 ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಂಡಿದ್ದಾರೆ.