Modi Road Show: ಸೂರತ್​​ನಲ್ಲಿ ಪ್ರಧಾನಿ ರೋಡ್​​ ಶೋ; ರಸ್ತೆಯುದ್ದಕ್ಕೂ ಮೋದಿಗೆ ಜೈಕಾರ ಹಾಕಿ ಸ್ವಾಗತ

Edited By:

Updated on: Nov 28, 2022 | 11:44 AM

ಸೂರತ್​ನ ರಸ್ತೆಗಳುದ್ದಕ್ಕೂ ಜನರು ಮೋದಿ ಮೋದಿ ಎಂದು ಜೋರಾಗಿ ಘೋಷಣೆ ಕೂಗುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ತಮ್ಮ ಕಾರಿನ ಡೋರ್​​ನಲ್ಲಿ ನಿಂತು ಅಕ್ಕಪಕ್ಕದಲ್ಲಿ ನಿಂತಿದ್ದ ಸಾವಿರಾರು ಜನರತ್ತ ಕೈಬೀಸಿದ್ದಾರೆ.

ಗುಜರಾತ್‌ನ ಸೂರತ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಸಂಜೆ ಬೃಹತ್ ರೋಡ್‌ಶೋ (Surat Road Show) ನಡೆಸಿದರು. ರಾತ್ರಿಯಾದರೂ ರಸ್ತೆಗಳ ಪಕ್ಕದಲ್ಲಿ, ಕಟ್ಟಡಗಳ ಮೇಲೆ ನಿಂತುಕೊಂಡು ಲಕ್ಷಾಂತರ ಜನರು ಮೋದಿಯನ್ನು ಸ್ವಾಗತಿಸುತ್ತಿರುವ ವಿಡಿಯೋ, ಫೋಟೋಗಳು ವೈರಲ್ ಆಗಿವೆ. ಅಲ್ಲದೆ, ಜನರು ‘ಮೋದಿ ಮೋದಿ’ ಎಂದು ಜೋರಾಗಿ ಘೋಷಣೆ ಕೂಗುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಕಾರಿನ ಡೋರ್​​ನಲ್ಲಿ ನಿಂತುಕೊಂಡು ರಸ್ತೆಯುದ್ದಕ್ಕೂ ಜನರತ್ತ ಕೈಬೀಸಿದ್ದಾರೆ. ಸೂರತ್‌ನ 12 ವಿಧಾನಸಭಾ ಕ್ಷೇತ್ರಗಳಿಗೆ ಡಿಸೆಂಬರ್ 1ರಂದು ಮೊದಲ ಹಂತದ ಚುನಾವಣೆಯಲ್ಲಿ ಮತದಾನ ನಡೆಯಲಿದೆ.

Published on: Nov 28, 2022 11:44 AM
Loading...
Unable to load recommendations.
Follow Us
TV9 Web

TV9 Kannada

Read More