PM Narendra Modi Rally: ಗುಜರಾತ್​ನಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಚುನಾವಣಾ ರ‍್ಯಾಲಿ

182 ಸದಸ್ಯ ಬಲದ ಗುಜರಾತ್ ವಿಧಾನಸಭೆಗೆ ಡಿಸೆಂಬರ್ 1 ಮತ್ತು 5ರಂದು 2 ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಡಿಸೆಂಬರ್ 8ರಂದು ಮತ ಎಣಿಕೆ ನಡೆಯಲಿದೆ.

PM Narendra Modi Rally: ಗುಜರಾತ್​ನಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಚುನಾವಣಾ ರ‍್ಯಾಲಿ
Modi speech in Indonesia
TV9kannada Web Team

| Edited By: Sushma Chakre

Nov 21, 2022 | 10:00 AM

ಅಹಮದಾಬಾದ್: ಗುಜರಾತ್​​ನಲ್ಲಿ ಮುಂದಿನ ತಿಂಗಳು ವಿಧಾನಸಭೆ (Gujarat Assembly Elections) ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ನಾಯಕರು ಚುನಾವಣಾ ಪ್ರಚಾರವನ್ನು ಚುರುಕುಗೊಳಿಸಿದ್ದಾರೆ. ಗುಜರಾತ್‌ಗೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi in Gujarat) ಇಂದು 3 ಸಾರ್ವಜನಿಕ ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಪ್ರಧಾನಮಂತ್ರಿ ಮೋದಿ ಆಡಳಿತಾರೂಢ ಬಿಜೆಪಿಯ ಪರವಾಗಿ ಶನಿವಾರ ವಲ್ಸಾದ್‌ನಲ್ಲಿ ರೋಡ್‌ಶೋ ಮೂಲಕ ಪ್ರಾರಂಭಿಸಿದ ‘ವಿಜಯ್ ಸಂಕಲ್ಪ ಸಮ್ಮೇಳನಗಳ’ ಸರಣಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇಂದು ಅವರು ಸುರೇಂದ್ರನಗರ ಜಿಲ್ಲೆಯ ಧ್ರಂಗಾಧ್ರ, ಭರೂಚ್ ಜಿಲ್ಲೆಯ ಜಂಬೂಸರ್ ಮತ್ತು ನವಸಾರಿ ನಗರದಲ್ಲಿ ಬಿಜೆಪಿಯ ಪ್ರಚಾರದ ಭಾಗವಾಗಿ ಆಯೋಜಿಸಲಾದ ರ‍ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಇದನ್ನೂ ಓದಿ: ಗುಜರಾತ್ ವಿಧಾನಸಭೆ ಚುನಾವಣೆ: ಒಂದೆಡೆ ಮೋದಿ ರೋಡ್ ಶೋ, ಮತ್ತೊಂದೆಡೆ ಬಂಡಾಯ, 7 ಶಾಸಕರು ಸಸ್ಪೆಂಡ್

ಪ್ರಧಾನಮಂತ್ರಿಯವರು ಭಾನುವಾರ ಗುಜರಾತ್ ರಾಜ್ಯದ 4 ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ. ವೆರಾವಲ್, ಧೋರಾಜಿ, ಅಮ್ರೇಲಿ ಮತ್ತು ಬೊಟಾಡ್ ಭಾಗಗಳಲ್ಲಿ ಮೋದಿ ನಿನ್ನೆ ಚುನಾವಣಾ ಭಾಷಣ ಮಾಡಿದ್ದಾರೆ.

182 ಸದಸ್ಯ ಬಲದ ಗುಜರಾತ್ ವಿಧಾನಸಭೆಗೆ ಡಿಸೆಂಬರ್ 1 ಮತ್ತು 5ರಂದು 2 ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಡಿಸೆಂಬರ್ 8ರಂದು ಮತ ಎಣಿಕೆ ನಡೆಯಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada