Loading video

ಟ್ರಂಪ್​ ಜತೆ​ ಮೆಗಾ ಡೀಲ್​: ಮೋದಿ ಬುದ್ಧಿವಂತಿಕೆ, ಚಾಣಾಕ್ಷತನವನ್ನ ಕೊಂಡಾಡಿದ ವಿದೇಶಿ ಮಾಧ್ಯಮಗಳು

|

Updated on: Feb 15, 2025 | 12:34 PM

ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕ ಪ್ರವಾಸ ಮುಗಿಸಿ ಭಾರತಕ್ಕೆ ಮರಳಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ರಕ್ಷಣಾ, ವ್ಯಾಪಾರ, ತಂತ್ರಜ್ಞಾನ ಮತ್ತು ಮೂಲಸೌಕರ್ಯದಂತಹ ವಿಷಯಗಳ ಕುರಿತು ಚರ್ಚಿಸಿದ್ದಾರೆ. 'ಮೆಗಾ' (MEGA) ಪಾಲುದಾರಿಕೆಗಾಗಿ 'ಮಗಾ' (MAGA) ಮತ್ತು ಮಿಗಾ (Make India Great Again-MIGA) ಒಂದಾಗಿದೆ ಎಂದು ಘೋಷಿಸಿದ್ದಾರೆ. ಅಮೆರಿಕದ ಮಾಧ್ಯಮಗಳು ಮೋದಿಯವರ ರಾಜತಾಂತ್ರಿಕ ಚಾಣಾಕ್ಷತೆಯನ್ನು ಹೊಗಳಿವೆ.

ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕ ಪ್ರವಾಸ ಮುಗಿಸಿ ಭಾರತಕ್ಕೆ ಮರಳಿದ್ದಾರೆ. ಡ್ರೊನಾಲ್ಡ್​ ಟ್ರಂಪ್​ ಎರಡನೇ ಬಾರಿಗೆ ಅಮೆರಿಕದ ಅಧ್ಯಕ್ಷ ಸ್ಥಾನ ಅಲಂಕರಿಸಿದ ಬಳಿಕ ಪ್ರಧಾನಿ ಮೋದಿಯವರ ಇದು ಮೊದಲನೇ ಭೇಟಿಯಾಗಿತ್ತು. ಮೋದಿಯ ರಾಜತಾಂತ್ರಿಕ ಚಾಣಾಕ್ಷತೆ, ಸೂಕ್ಷ್ಮತೆ, ವಿವೇಚನೆ, ಕೌಶಲ್ಯತೆ ಕಂಡು ವಿದೇಶಿ ಖಾಸಗಿ ಮಾಧ್ಯಮಗಳು ಅವರನ್ನು ಹಾಡಿಹೊಗಳುತ್ತಿವೆ. ಪ್ರಧಾನಿ ಮೋದಿಯವರು ಶುಕ್ರವಾರ ಶ್ವೇತಭವನದಲ್ಲಿ ಡೊನಾಲ್ಡ್​ ಟ್ರಂಪ್​ ಅವರನ್ನು ಭೇಟಿಯಾದರು. ಈ ವೇಳೆ “ರಕ್ಷಣಾ ವ್ಯವಸ್ಥೆ ಬಲಪಡಿಸುವುದು, ವಾಣಿಜ್ಯ-ವ್ಯಾಪಾರ, ಇಂಧನ, ಮೂಲಸೌಕರ್ಯ, ತಂತ್ರಜ್ಞಾನ ವೃದ್ಧಿ” ಸೇರಿದಂತೆ ಹಲವು ಮಹತ್ವದ ವಿಷಯಗಳ ಕುರಿತು ಉಭಯ ನಾಯಕರು ಚರ್ಚಿಸಿದರು.
‘ಮೆಗಾ’ (MEGA) ಪಾಲುದಾರಿಕೆಗಾಗಿ ‘ಮಗಾ’ (MAGA) ಮತ್ತು ಮಿಗಾ (Make India Great Again-MIGA) ಒಂದಾಗಿವೆ ಎಂದು ಪ್ರಧಾನಿ ಮೋದಿಯವರು ಅಮೆರಿಕದ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಜತೆಗೆ ನಡೆಸಿದ ಚರ್ಚೆ ಬಳಿಕ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published on: Feb 15, 2025 12:25 PM