Unaccounted money traced in Soudha: ಅದು ಯಾವುದೋ ಸಚಿವನಿಗೆ ಕಮೀಶನ್ ನೀಡಲು ತಂದ ಹಣವಾಗಿರುತ್ತದೆ: ಡಿಕೆ ಶಿವಕುಮಾರ

Edited By:

Updated on: Jan 05, 2023 | 1:40 PM

ಹಣದ ಜೊತೆ ಸಿಕ್ಕ ವ್ಯಕ್ತಿಯನ್ನು ವಿಚಾರಣೆ ನಡೆಸುತ್ತಿದ್ದ ಪೊಲೀಸರು ಯಾವುದೋ ಸಚಿವರ ಫೋನ್ ಬಂದ ಕೂಡಲೇ ಬಿಟ್ಟು ಕಳಸಿದರಂತೆ ಎಂದು ಶಿವಕುಮಾರ ಆರೋಪಿಸಿದರು.

ಬೆಂಗಳೂರು: ವಿಧಾನ ಸೌಧದ ಹಣ ದಾಖಲೆರಹಿತ ಹಣ ಪತ್ತೆಯಾಗಿದ್ದು ಯಾವುದೋ ಮಂತ್ರಿಗೆ ಬಿಲ್ ಪಾಸ್ ಮಾಡಲು ಕಮೀಶನ್ (commission) ನೀಡಲು ತಂದಿರುವ ಹಣವಾಗಿರುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ (DK Shivakumar) ಹೇಳಿದ್ದಾರೆ. ಮುಂದಿನ ವಿಧಾನ ಸಭೆಗೆ (assembly polls) ಕೇವಲ 60 ದಿನಗಳು ಬಾಕಿಯಿರುವುದರಿಂದ ವಿಧಾನ ಸೌಧದಲ್ಲಿರುವ ಪ್ರತಿ ಕಚೇರಿಯಲ್ಲಿ ಕಮೀಶನ್ ವ್ಯವಾಹಾರ ನಡೆಯುತ್ತಿದೆ, ಸಾಧ್ಯವಿದ್ದಷ್ಟು ಹಣ ದೋಚಿಕೊಳ್ಳುವ ಹುನ್ನಾರ ಮಂತ್ರಿಗಳದ್ದು. ಹಣದ ಜೊತೆ ಸಿಕ್ಕ ವ್ಯಕ್ತಿಯನ್ನು ವಿಚಾರಣೆ ನಡೆಸುತ್ತಿದ್ದ ಪೊಲೀಸರು ಯಾವುದೋ ಸಚಿವರ ಫೋನ್ ಬಂದ ಕೂಡಲೇ ಬಿಟ್ಟು ಕಳಸಿದರಂತೆ ಎಂದು ಶಿವಕುಮಾರ ಆರೋಪಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ