Karnataka Assembly Polls; ದುಡ್ಡಿಗಾಗಿ ಅಲ್ಲ, ಹೃದಯದ ಕರೆಗೆ ಓಗೊಟ್ಟು ಪ್ರಚಾರಕ್ಕೆ ಬಂದಿದ್ದೇನೆ: ಸಂಬರಗಿಗೆ ತಿರುಗೇಟು ನೀಡಿದ ಶಿವರಾಜಕುಮಾರ್
ಜಗದೀಶ್ ಶೆಟ್ಟರ್ ಕೂಡ, ಶಿವರಾಜ್ ಕುಮಾರ್ ತಾವೇ ಫೋನ್ ಮಾಡಿ ಪ್ರಚಾರಕ್ಕೆ ಬಂದಿದ್ದಾರೆ ಎಂದು ಹೇಳಿದರು.
ಹುಬ್ಬಳ್ಳಿ: ಸಾಮಾಜಿಕ ಕಾರ್ಯಕರ್ತ ಎಂದು ಗುರುತಿಸಿಕೊಂಡಿರುವ ಪ್ರಶಾಂತ್ ಸಂಬರಗಿ (Prashanth Sambargi) ಆಗಾಗ ವಿವಾದಾತ್ಮಕ ಟ್ವೀಟ್ ಗಳನ್ನು ಮಾಡುತ್ತಿರುತ್ತಾರೆ. ಕನ್ನಡದ ಖ್ಯಾತ ನಟ ಶಿವರಾಜ್ ಕುಮಾರ್ (Shivarajkumar) ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತಿರುವುದಕ್ಕೆ, ಶಿವಣ್ಣ ಸ್ಕ್ರಿಪ್ಟ್ ಓದದೆ ಪೇಮೆಂಟ್ ತೆಗೆದುಕೊಳ್ಳುತ್ತಾರೆ, ಚುನಾವಣೆ ಪ್ರಚಾರಕ್ಕೂ ಅದೇ ಧೋರಣೆಯಿಂದ ಬಂದಿದ್ದಾರೆ ಎಂದು ಸಂಬರಗಿ ಟ್ವೀಟ್ ಮಾಡಿದ್ದಾರೆ. ಹುಬ್ಬಳ್ಳಿಯಲ್ಲಿಂದು ಕಾಂಗ್ರೆಸ್ ಅಭ್ಯರ್ಥಿ ಜಗದೀಶ್ ಶೆಟ್ಟರ್ (Jagadish Shettar) ಪರ ಪ್ರಚಾರ ಮಾಡುವಾಗ ಸಂಬರಗಿ ಟ್ವೀಟ್ ಗೆ ಪ್ರತಿಕ್ರಿಯಿಸಿದ ಶಿವರಾಜ್ ಕುಮಾರ್, ಸಂಬರಗಿ ತಮ್ಮ ಮಾತುಗಳನ್ನು ವಾಪಸ್ಸು ತೆಗೆದುಕೊಳ್ಳಬೇಕು, ತಮಗೇನು ದುಡ್ಡಿನ ಕೊರತೆಯಾಗಿದೆಯಾ? ದುಡ್ಡಿಗಾಗಿ ತಾನು ಪ್ರಚಾರ ಮಾಡಲು ಬಂದಿಲ್ಲ, ಯಾರಿಂದಲೂ ದುಡ್ಡು ತೆಗೆದುಕೊಂಡಿಲ್ಲ, ಮನಸಾರೆ, ಹೃದಯದ ಕರೆಗೆ ಓಗೊಟ್ಟು ಬಂದಿದ್ದೇನೆ ಎಂದು ಹೇಳಿದರು. ಶೆಟ್ಟರ್ ಕೂಡ, ಶಿವರಾಜ್ ಕುಮಾರ್ ತಾವೇ ಫೋನ್ ಮಾಡಿ ಪ್ರಚಾರಕ್ಕೆ ಬಂದಿದ್ದಾರೆ ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ