ಕಂಟ್ರ್ಯಾಕ್ಟರ್ ಮನೇಲಿ ಬರಾಮತ್ತಾಗಿದ್ದು ಸರ್ಕಾರಕ್ಕೆ ಸಿಕ್ಕ ಕಿಕ್​ಬ್ಯಾಕ್ ಮತ್ತು ಕಮೀಶನ್ ಹಣ: ಡಾ ಸಿಎನ್ ಅಶ್ವಥ್ ನಾರಾಯಣ, ಬಿಜೆಪಿ ಶಾಸಕ

|

Updated on: Oct 13, 2023 | 4:00 PM

ಲೋಡ್ ಶೆಡ್ಡಿಂಗ್ ಬಗ್ಗೆ ಮಾತಾಡಿದ ಅಶ್ವಥ್ ನಾರಾಯಣ, ಕಾಂಗ್ರೆಸ್ ಸರ್ಕಾರವೇ ಹಾಗೆ, ಅದು ಅಧಿಕಾರಕ್ಕೆ ಬಂದಾಗಲೆಲ್ಲ ದಾರಿದ್ರ್ಯ, ಬರ ಮತ್ತು ಕತ್ತಲೆ. ಬಿಜೆಪಿ ಸರ್ಕಾರ ಆಧಿಕಾರದಲ್ಲಿದ್ದಾಗ ಹೆಚ್ಚುವರಿ ವಿದ್ಯುತ್ ಉತ್ಪಾದನೆ ಆಗುತಿತ್ತು, ಆದರೆ ಬಿಟ್ಟಿ ಭಾಗ್ಯ ಕೊಟ್ಟಿರುವ ಕಾಂಗ್ರೆಸ್ ಸರ್ಕಾರ ಜನರನ್ನು ಕತ್ತಲೆಗೆ ದೂಡಿದೆ ಎಂದರು.

ಬೆಂಗಳೂರು: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಬಿಜೆಪಿ ಶಾಸಕ ಡಾ ಸಿಎನ್ ಅಶ್ವಥ್ ನಾರಾಯಣ (Dr CN Ashwath Narayan), ಬಿಬಿಎಂಪಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಅರ್ ಅಂಬಿಕಾಪತಿ (R Ambikapathy) ಬಳಿ ಸಿಕ್ಕಿರುವ ಹಣ ಕಾಂಗ್ರೆಸ್ ಸರ್ಕಾರ ಕಿಕ್ ಬ್ಯಾಕ್ ಮೂಲಕ, ಕಮೀಶನ್ (commision) ಮೂಲಕ ಪಡೆದಿರುವ ಹಣ ಎಂದು ಹೇಳಿದರು. ಅದು ಕಂಟ್ರ್ಯಾಕ್ಟರ್ ಗೆ ಬಿಲ್ ಮೂಲಕ ಸಿಕ್ಕಿರುವ ದುಡ್ಡು ಆಗಿರಲು ಸಾಧ್ಯವೇ ಇಲ್ಲ, ಯಾಕೆಂದರೆ ಗುತ್ತಿಗೆದಾರರಿಗೆ ಚೆಕ್ ಗಳಲ್ಲಿ ಬಿಲ್ ಪೇಮೆಂಟ್ ಆಗುತ್ತದೆಯೇ ಹೊರತು ನಗದು ರೂಪದಲ್ಲಿ ಸಂದಾಯ ಆಗಲ್ಲ ಎಂದು ಅವರು ಹೇಳಿದರು. ಕಿಕ್ ಬ್ಯಾಕ್ ಯಾರು ನೀಡಿದ್ದಾರೆ, ಸಚಿವನ ಹೆಸರು ಹೇಳಿ ಅಂತ ಮಾಧ್ಯಮದವರು ಕೇಳಿದಾಗ, ಅದನ್ನು ತಾನು ಹೇಗೆ ಹೇಳಲು ಸಾಧ್ಯ ಎಂದ ಅಶ್ವಥ್ ನಾರಾಯಣ, ಗುತ್ತಿಗೆದಾರರು ಕೆಂಪಣ್ಣ ನೇತೃತ್ವದಲ್ಲಿ ರಾಜ್ಯಪಾಲರಿಗೆ; ಸಚಿವರು ಕಮೀಶನ್ ಕೇಳುತ್ತಿದ್ದಾರೆ ಅಂತ ದೂರು ನೀಡಿದ್ದರು. ದೂರಿನಲ್ಲಿ ಅವರು ಸಚಿವರ ಹೆಸರುಗಳನ್ನು ಉಲ್ಲೇಖಿಸಿದ್ದಾರೆ ನಿಮ್ಮ ಹಳೆಯ ವರದಿಗಳನ್ನು ತಡಕಾಡಿದರೆ ಹೆಸರುಗಳು ಸಿಗುತ್ತವೆ ಎಂದು ಶಾಸಕ ಹೇಳಿದರು. ಲೋಡ್ ಶೆಡ್ಡಿಂಗ್ ಬಗ್ಗೆ ಮಾತಾಡಿದ ಅಶ್ವಥ್ ನಾರಾಯಣ, ಕಾಂಗ್ರೆಸ್ ಸರ್ಕಾರವೇ ಹಾಗೆ, ಅದು ಅಧಿಕಾರಕ್ಕೆ ಬಂದಾಗಲೆಲ್ಲ ದಾರಿದ್ರ್ಯ, ಬರ ಮತ್ತು ಕತ್ತಲೆ. ಬಿಜೆಪಿ ಸರ್ಕಾರ ಆಧಿಕಾರದಲ್ಲಿದ್ದಾಗ ಹೆಚ್ಚುವರಿ ವಿದ್ಯುತ್ ಉತ್ಪಾದನೆ ಆಗುತಿತ್ತು, ಆದರೆ ಬಿಟ್ಟಿ ಭಾಗ್ಯ ಕೊಟ್ಟಿರುವ ಕಾಂಗ್ರೆಸ್ ಸರ್ಕಾರ ಜನರನ್ನು ಕತ್ತಲೆಗೆ ದೂಡಿದೆ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ