ಅಸೆಂಬ್ಲಿ ಚುನಾವಣೆಯಲ್ಲಿ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಹೇಳಿದ್ದು ದಾಖಲೆ ಸಮೇತ ಸಾಬೀತಾಗಿದೆ: ಕೆಎಸ್ ಈಶ್ವರಪ್ಪ
ಬಿಜೆಪಿ ಅಧಿಕಾರದಲ್ಲಿದ್ದಾಗ ತಾನೇ ಸತ್ಯ ಹರಿಶ್ಚಂದ್ರನಂತೆ ಆಡುತ್ತಿದ್ದ ಗುತ್ತಿಗೆದಾರ ಕೆಂಪಣ್ಣ, ತಮ್ಮ ಸಂಘದ ಉಪಾಧ್ಯಕ್ಷನ ಮನೇಲಿ ಅಷ್ಟೊಂದು ಹಣ ಸಿಕ್ಕರೂ ಸುಮ್ಮನಿದ್ದಾರಲ್ಲ? ಈ ಪ್ರಕರಣದಲ್ಲಿ ಅವರ ಪಾತ್ರವೇನು ಅನ್ನೋದು ಸಹ ಜನಕ್ಕೆ ಗೊತ್ತಾಗಬೇಕು ಎಂದು ಬಿಜೆಪಿ ನಾಯಕ ಹೇಳಿದರು.
ಬೆಂಗಳೂರು: ನಾವು ಈಗಾಗಲೇ ವರದಿ ಮಾಡಿರುವಂತೆ ಗುತ್ತಿಗೆದಾರ ಆರ್ ಅಂಬಿಕಾಪತಿ (R Ambikapathy) ಮನೆಯಲ್ಲಿ ಸಿಕ್ಕಿರುವ 42 ಕೋಟಿ ರೂ. ಹಣ ರಾಜಕೀಯ ವಲಯಗಳಲ್ಲಿ ತೀವ್ರವಾಗಿ ಚರ್ಚೆಯಾಗುತ್ತಿದೆ. ಬಿಜೆಪಿ ನಾಯಕರು ಕಾಂಗ್ರೆಸ್ ಸರ್ಕಾರದ ವಿರುದ್ಧ ನೇರ ಆರೋಪಗಳನ್ನು ಮಾಡುತ್ತಿದ್ದಾರೆ. ನಗರದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಮಾಜಿ ಸಚಿವ ಕೆಎಸ್ ಈಶ್ವರಪ್ಪ (KS Eshwarappa), ವಿಧಾನ ಸಭಾ ಚುನಾವಣೆ ನಡೆಯುವಾಗ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಮತ್ತು ಗೃಹ ಸಚಿವ ಅಮಿತ್ ಶಾ (Amit Shah) ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಬೇಡಿ, ಗೆಲ್ಲಿಸಿದರೆ ಕರ್ನಾಟಕ ದೆಹಲಿಯಲ್ಲಿರುವ ಎಐಸಿಸಿಯ ಎಟಿಎಂ ಆಗಿಬಿಡುತ್ತದೆ ಅಂತ ಹೇಳಿದ್ದರು. ಅವರು ಹೇಳಿದ್ದು ಇವತ್ತು ಸಾಕ್ಷಿ ಸಮೇತ ಪ್ರೂವ್ ಆಗಿದೆ ಎಂದು ಹೇಳಿದರು. ಇದು ಯಾರ ಹಣ, ಇದರಲ್ಲಿ ಸಿಎಂ ಸಿದ್ದರಾಮಯ್ಯ ಪಾತ್ರವೇನು, ಡಿಸಿಎಂ ಶಿವಕುಮಾರ್ ಪಾತ್ರ ಏನು ಮೊದಲಾದ ಸಂಗತಿಗಳ ತನಿಖೆಯಾಗಬೇಕು ಎಂದು ಈಶ್ವರಪ್ಪ ಹೇಳಿದರು. ಬಿಜೆಪಿ ಅಧಿಕಾರದಲ್ಲಿದ್ದಾಗ ತಾನೇ ಸತ್ಯ ಹರಿಶ್ಚಂದ್ರನಂತೆ ಆಡುತ್ತಿದ್ದ ಗುತ್ತಿಗೆದಾರ ಕೆಂಪಣ್ಣ, ತಮ್ಮ ಸಂಘದ ಉಪಾಧ್ಯಕ್ಷನ ಮನೇಲಿ ಅಷ್ಟೊಂದು ಹಣ ಸಿಕ್ಕರೂ ಸುಮ್ಮನಿದ್ದಾರಲ್ಲ? ಈ ಪ್ರಕರಣದಲ್ಲಿ ಅವರ ಪಾತ್ರವೇನು ಅನ್ನೋದು ಸಹ ಜನಕ್ಕೆ ಗೊತ್ತಾಗಬೇಕು ಎಂದು ಬಿಜೆಪಿ ನಾಯಕ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ