Loading video

ಚಾಮುಂಡಿ ಬೆಟ್ಟ ತಪ್ಪಲಿನಲ್ಲಿ ಕಪಿ ಚೇಷ್ಟೆ; ಭಕ್ತರೊಬ್ಬರ ಫೋನ್ ಕಿತ್ತುಕೊಂಡು ಮರವೇರಿದ ಮಂಗ

| Updated By: ಆಯೇಷಾ ಬಾನು

Updated on: May 23, 2024 | 11:10 AM

ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಭಕ್ತರೊಬ್ಬರ ಪರ್ಸ್, ಮೊಬೈಲ್ ಫೋನ್ ಕಿತ್ತುಕೊಂಡು ಮಂಗ ಸತಾಯಿಸಿದ ಘಟನೆ ನಡೆದಿದೆ. ಕೋತಿ ಮಹಿಳೆ ಕೈಯಲ್ಲಿದ್ದ ಪರ್ಸ್ ಕಸಿದು ಅದರೊಳಗಿನ ವಸ್ತುಗಳನ್ನು ಬೀಳಿಸಿ ಮೊಬೈಲ್ ಮಾತ್ರ ವಾಪಾಸ್ ನೀಡಲು ಸತಾಯಿಸಿದೆ. ಕೊನೆಗೆ ಅರ್ಥ ಘಂಟೆಯ ಬಳಿಕ ಮೊಬೈಲ್ ಎಸೆದಿದೆ.

ಮೈಸೂರು, ಮೇ.23: ಮಂಗನಿಂದ ಮಾನವ ಎಂಬ ಮಾತಿನಂತೆ ಈಗ ಮಂಗಗಳಿಗೂ (Monkey) ಮೊಬೈಲ್​ ಫೋನಿನ ಮೇಲೆ ಆಸಕ್ತಿ ಹೆಚ್ಚಾಗಿದೆ. ಮಂಗನ ಕೈಗೆ ಫೋನ್ (Mobile) ಕೊಟ್ರೆ ಏನಾಗುತ್ತೆ ಎಂಬ ಬಗ್ಗೆ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಹತ್ತಾರು ವಿಡಿಯೋಗಳಿವೆ. ಆದರೆ ಮೈಸೂರಿನ ಚಾಮುಂಡಿ ಬೆಟ್ಟಕ್ಕೆಂದು (Chamundi Hills) ಹಾಸನದಿಂದ ಬಂದಿದ್ದ ಕುಟುಂಬಸ್ಥರ ಫೋನ್ ಕಿತ್ತುಕೊಂಡು ಮಂಗ ಮರ ಏರಿದ ಘಟನೆ ನಡೆದಿದ್ದು ಫೋನ್​ಗಾಗಿ ಕುಟುಂಬಸ್ಥರು ಪರದಾಡುವಂತಾಗಿತ್ತು.

ಜಿಲ್ಲೆಯ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಹಾಸನದಿಂದ ಬಂದಿದ್ದ ಕುಟುಂಬವೊಂದು ಮರದತ್ತ ನೋಡುತ್ತ ಅಂಗಲಾಚುತ್ತಿದ್ದರು. ಅಪರೂಪದ ಪಕ್ಷಿ ಕಾಣಿಸುತ್ತಿರಬೇಕೆನೋ ಎಂದು ಮರದಂತ ನೋಡಿದಾಗ ಮಂಗವೊಂದು ಫೋನ್ ಹಿಡಿದು ಅಂತಿಂದಿತ್ತ ಓಡಾಡುತ್ತಿತ್ತು. ನಾಡದೇವತೆ ತಾಯಿ ಚಾಮುಂಡೇಶ್ವರಿ ದರ್ಶನಕ್ಕೆ ಮೆಟ್ಟಿಲು ಹತ್ತಿ ಹೋಗಲು ಕುಟುಂಬಸ್ಥರು ಚಾಮುಂಡಿ ವಿಗ್ರಹಕ್ಕೆ ಪೂಜೆ ಸಲ್ಲಿಸುತ್ತಿದ್ರು. ಈ ವೇಳೆ ಮಹಿಳೆಯ ಕೈಲಿದ್ದ ಪರ್ಸ್ ಕಸಿದು ಕೋತಿ ಮರವೇರಿದೆ. ಪರ್ಸ್ ನಲ್ಲಿದ್ದ ಒಂದೊಂದೇ ಪದಾರ್ಥಗಳನ್ನ ಬಿಸಾಡಿ ಕೊನೆಗೆ ಮೊಬೈಲ್ ಬಿಡದೆ ಕೊಂಬೆಯಿಂದ ಕೊಂಬೆಗೆ ಹಾರಿ ಕಿರಿಕಿರಿ ಮಾಡಿದೆ. ಕಪಿರಾಯನ ಚೇಷ್ಠೆಗೆ ಮಹಿಳೆ ಪರದಾಡಿದ್ದಾರೆ. ಬಾಳೆಹಣ್ಣು ಆಮೀಷ ನೀಡಿದರೂ ಮಂಗ ಮೊಬೈಲ್ ಬಿಟ್ಟಿಲ್ಲ. ಸುಮಾರು ಅರ್ಧಗಂಟೆ ಕಾಲ ತನ್ನ ಚೇಷ್ಠೆಯನ್ನ ಮುಂದುವರೆಸಿ ಕೊನೆಗೆ ಮೊಬೈಲ್ ಬಿಸಾಡಿದೆ. ಅಪರೂಪದ ಘಟನೆಗೆ ಚಾಮುಂಡಿ ಬೆಟ್ಟದ ತಪ್ಪಲು ಸಾಕ್ಷಿಯಾಯಿತು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ