ವಾನರ ಸೇನೆಯ ಹಾವಳಿಗೆ ತತ್ತರಿಸಿದ ಅನ್ನದಾತ

|

Updated on: Sep 29, 2020 | 3:43 PM

[lazy-load-videos-and-sticky-control id=”KKpndR6qqOQ”] ರಾಯಚೂರು: ಕೊರೊನಾ ಸಂಕಷ್ಟದಿಂದ ಸುಧಾರಿಸಿಕೊಳ್ಳುವ ಮೊದ್ಲೇ ಉತ್ತರ ಕರ್ನಾಟಕದಲ್ಲಿ ನೆರೆ ಹಾವಳಿ ಶುರುವಾಗಿತ್ತು. ಇದನ್ನ ಸುಧಾರಿಸಿಕೊಳ್ಳುವ ಹೊತ್ತಲ್ಲೇ ವರುಣ ಕೆಂಗಣ್ಣು ಬೀರಿದ್ದ. ಈ ಮಹಾಘಾತದಿಂದ ಸುಧಾರಿಸಿಕೊಳ್ಳೊ ಹೊತ್ತಲ್ಲಿ ಹೊಸ ಸಮಸ್ಯೆ ಎದುರಾಗಿದೆ. ಬಿಸಿಲ ನಾಡಿನ ರೈತರು ತತ್ತರಿಸಿ ಹೋಗಿದ್ದಾರೆ. ನಿತ್ಯ ಬೆಳೆ ಮೇಲೆ ದಾಳಿ ಮಾಡುತ್ತಿವೆ ಕೋತಿಗಳು: ಇಷ್ಟುದಿನ ನೂರಾರು ಸಮಸ್ಯೆಗೆ ಸಿಲುಕಿ ನರಳಿದ್ದ ಬಿಸಲ ನಾಡು ರಾಯಚೂರಿನ ರೈತರಿಗೆ ವಾನರ ಸೇನೆ ಕೂಡ ಕಿರಿಕ್ ಕೊಡಲು ಆರಂಭಿಸಿದೆ. ರಾಯಚೂರು ತಾಲೂಕು ಯರಗೇರ ಗ್ರಾಮದ […]

ವಾನರ ಸೇನೆಯ ಹಾವಳಿಗೆ ತತ್ತರಿಸಿದ ಅನ್ನದಾತ
Follow us on

[lazy-load-videos-and-sticky-control id=”KKpndR6qqOQ”]

ರಾಯಚೂರು: ಕೊರೊನಾ ಸಂಕಷ್ಟದಿಂದ ಸುಧಾರಿಸಿಕೊಳ್ಳುವ ಮೊದ್ಲೇ ಉತ್ತರ ಕರ್ನಾಟಕದಲ್ಲಿ ನೆರೆ ಹಾವಳಿ ಶುರುವಾಗಿತ್ತು. ಇದನ್ನ ಸುಧಾರಿಸಿಕೊಳ್ಳುವ ಹೊತ್ತಲ್ಲೇ ವರುಣ ಕೆಂಗಣ್ಣು ಬೀರಿದ್ದ. ಈ ಮಹಾಘಾತದಿಂದ ಸುಧಾರಿಸಿಕೊಳ್ಳೊ ಹೊತ್ತಲ್ಲಿ ಹೊಸ ಸಮಸ್ಯೆ ಎದುರಾಗಿದೆ. ಬಿಸಿಲ ನಾಡಿನ ರೈತರು ತತ್ತರಿಸಿ ಹೋಗಿದ್ದಾರೆ.

ನಿತ್ಯ ಬೆಳೆ ಮೇಲೆ ದಾಳಿ ಮಾಡುತ್ತಿವೆ ಕೋತಿಗಳು:
ಇಷ್ಟುದಿನ ನೂರಾರು ಸಮಸ್ಯೆಗೆ ಸಿಲುಕಿ ನರಳಿದ್ದ ಬಿಸಲ ನಾಡು ರಾಯಚೂರಿನ ರೈತರಿಗೆ ವಾನರ ಸೇನೆ ಕೂಡ ಕಿರಿಕ್ ಕೊಡಲು ಆರಂಭಿಸಿದೆ. ರಾಯಚೂರು ತಾಲೂಕು ಯರಗೇರ ಗ್ರಾಮದ ಸುತ್ತಮುತ್ತ ದಿನನಿತ್ಯ ರೈತರ ಬೆಳೆಗಳ ಮೇಲೆ ಕಪಿ ಸೇನೆ ದಾಳಿಯಿಡುತ್ತಿದೆ. ಇದರಿಂದ ರೈತರು ಅಕ್ಷರಶಃ ಕಂಗಾಲಾಗಿ ಹೋಗಿದ್ದಾರೆ. ಕೋತಿಗಳ ಕಾಟ ಸಹಿಸದೇ ಹತ್ತಾರು ಬಾರಿ ಅರಣ್ಯ ಇಲಾಖೆಗೆ ದೂರು ಕೊಟ್ಟರೂ ಪ್ರಯೋಜನವಾಗಿಲ್ಲ. ವಿದ್ಯುತ್ ಕಂಬ ಏರಿ ಕುಳಿತುಕೊಳ್ಳುವ ಕೋತಿಗಳು ರೈತರು ಮನೆಗೆ ತೆರಳುತ್ತಿದ್ದಂತೆ ಹತ್ತಿ ಸೇರಿದಂತೆ ಇನ್ನಿತರ ಬೆಳೆಗಳ ಮೇಲೆ ದಿಢೀರ್ ದಾಳಿ ಮಾಡುತ್ತಿವೆ.