ತುಂಗಾ ನದಿ ಮಧ್ಯೆ ಸಿಲುಕಿರುವ ಮಂಗಗಳು: ರಕ್ಷಣೆಗೆ ಸಿಬ್ಬಂದಿ ಹರಸಾಹಸ

|

Updated on: Aug 07, 2020 | 6:51 PM

[lazy-load-videos-and-sticky-control id=”qzYA30Vs-ds”] ದಾವಣಗೆರೆ: ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾದ ಹಿನ್ನೆಲೆ ಆ ಭಾಗದ ನದಿಗಳೆಲ್ಲ ಮೈತುಂಬಿ ಹರಿಯುತ್ತಿದ್ದು, ಹೊಳೆಯ ಮಧ್ಯದಲ್ಲಿ ಇರುವ ಮರದ ಮೇಲೆ ನೂರಾರು ಮಂಗಗಳು ಹಸಿವಿನಿಂದ ನರಳುತ್ತಿರುವ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನೆಡೆದಿದೆ. ದಾವಣಗೆರೆಯ ಹರಿಹರ ತಾಲ್ಲೂಕಿನ ರಾಜನಹಳ್ಳಿ‌ ಬಳಿ ತುಂಗಭದ್ರ ನದಿ ಮೈತುಂಬಿ ಹರಿಯುತ್ತಿದ್ದು, ನದಿಯ ಮಧ್ಯದಲ್ಲಿರುವ ಮರದ ಮೇಲೆ ಸಿಲುಕಿಕೊಂಡಿರುವ ಮಂಗಗಳು ಎರಡು ದಿನಗಳಿಂದ ಆಹಾರವಿಲ್ಲದೆ ನರಳುತ್ತಿವೆ. ಸ್ಥಳೀಯರಿಂದ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ತಲುಪಿದೆ. ಸ್ಥಳಕ್ಕಾಗಮಿಸಿದ […]

ತುಂಗಾ ನದಿ ಮಧ್ಯೆ ಸಿಲುಕಿರುವ ಮಂಗಗಳು: ರಕ್ಷಣೆಗೆ ಸಿಬ್ಬಂದಿ ಹರಸಾಹಸ
Follow us on

[lazy-load-videos-and-sticky-control id=”qzYA30Vs-ds”]

ದಾವಣಗೆರೆ: ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾದ ಹಿನ್ನೆಲೆ ಆ ಭಾಗದ ನದಿಗಳೆಲ್ಲ ಮೈತುಂಬಿ ಹರಿಯುತ್ತಿದ್ದು, ಹೊಳೆಯ ಮಧ್ಯದಲ್ಲಿ ಇರುವ ಮರದ ಮೇಲೆ ನೂರಾರು ಮಂಗಗಳು ಹಸಿವಿನಿಂದ ನರಳುತ್ತಿರುವ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನೆಡೆದಿದೆ.

ದಾವಣಗೆರೆಯ ಹರಿಹರ ತಾಲ್ಲೂಕಿನ ರಾಜನಹಳ್ಳಿ‌ ಬಳಿ ತುಂಗಭದ್ರ ನದಿ ಮೈತುಂಬಿ ಹರಿಯುತ್ತಿದ್ದು, ನದಿಯ ಮಧ್ಯದಲ್ಲಿರುವ ಮರದ ಮೇಲೆ ಸಿಲುಕಿಕೊಂಡಿರುವ ಮಂಗಗಳು ಎರಡು ದಿನಗಳಿಂದ ಆಹಾರವಿಲ್ಲದೆ ನರಳುತ್ತಿವೆ. ಸ್ಥಳೀಯರಿಂದ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ತಲುಪಿದೆ.

ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಅಗ್ನಿಶಾಮಕ ಸಿಬ್ಬಂದಿ ಬೋಟ್ ಮೂಲಕ ಮಂಗಗಳನ್ನು ಕೆಳಗಿಳಿಸಲು ಹರಸಾಹಸ ಪಡುತ್ತಿದ್ದಾರೆ. ಆದರೆ ಸಿಬ್ಬಂದಿಯ ಕಾರ್ಯಾಚರಣೆಗೆ ಮಂಗಗಳು ಹೆದರಿ ಮರದ ತುದಿಗೆ ಹೋಗಿ ಕುಳಿತಿವೆ. ಇದರಿಂದಾಗಿ ಅರಣ್ಯ ಇಲಾಖೆ ಹಾಗೂ ಅಗ್ನಿಶಾಮಕ ಸಿಬ್ಬಂದಿ ಬಲೆ ಹಾಕಿ.. ಮರದ ಮೇಲಿರುವ ಮಂಗಗಳನ್ನು ಹಿಡಿಯುವ ಪ್ರಯತ್ನ ಮಾಡುತ್ತಿದ್ದಾರೆ.

 

 

Published On - 12:01 pm, Fri, 7 August 20