ರೋಹಿಣಿ ನಕ್ಷತ್ರದಲ್ಲಿ ಚಂದ್ರ ಸಂಚಾರ: ಇಂದಿನ ರಾಶಿ ಭವಿಷ್ಯ ವಿವರಣೆ ಇಲ್ಲಿದೆ

Updated on: Nov 07, 2025 | 9:31 AM

ನವೆಂಬರ್ 7, 2025 ರ ಶುಕ್ರವಾರದ ದೈನಂದಿನ ರಾಶಿ ಭವಿಷ್ಯವನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಪ್ರಸ್ತುತಪಡಿಸಿದ್ದಾರೆ. ಇದು ವಿಶ್ವಾವಸುನಾಮ ಸಂವತ್ಸರದ ಕಾರ್ತಿಕ ಮಾಸದ ವಿಶೇಷ ದಿನವಾಗಿದೆ. ರೋಹಿಣಿ ನಕ್ಷತ್ರದಲ್ಲಿ ಚಂದ್ರ ಸಂಚಾರ ಮಾಡುವುದರಿಂದ ಗ್ರಹಗಳ ಶುಭ ಪರಿಣಾಮಗಳು ದ್ವಾದಶ ರಾಶಿಗಳ ಮೇಲೆ ಇರಲಿವೆ.

2025 ರ ನವೆಂಬರ್ 7, ಶುಕ್ರವಾರ, ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯನ, ಕಾರ್ತಿಕ ಮಾಸ, ಶರದೃತು, ಕೃಷ್ಣಪಕ್ಷ ಬಿದಿಗೆ, ರೋಹಿಣಿ ನಕ್ಷತ್ರ, ವರಿಯನ್ ಯೋಗ, ಗರಜಕರಣ ಇರತಕ್ಕಂತಹ ಈ ದಿನವು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹಲವಾರು ಮಹತ್ವಗಳನ್ನು ಹೊಂದಿದೆ. ರಾಹುಕಾಲವು ಬೆಳಗ್ಗೆ 10:35 ರಿಂದ 12:03 ರವರೆಗೆ ಇದ್ದು, ಸರ್ವಸಿದ್ಧಿ ಕಾಲ, ಸಂಕಲ್ಪ ಕಾಲ, ಶುಭಕಾಲವು ಮಧ್ಯಾಹ್ನ 12:03 ರಿಂದ 01:30 ರವರೆಗೆ ಇರುತ್ತದೆ. ಈ ದಿನವು ತಾಯಿಯ ಲಹರಿಗಳು, ದೇವಿಯ ಲಹರಿಗಳು, ದುರ್ಗಿಯ ಲಹರಿಗಳು, ಪಾರ್ವತಿಯ ಲಹರಿಗಳು, ತ್ರಿಶಕ್ತಿಗಳ ಲಹರಿಗಳಿರತಕ್ಕಂತಹ ಪರ್ವ ದಿನವಾಗಿದೆ. ಇಂದಿನ ದ್ವಾದಶ ರಾಶಿಗಳ ಫಲಾಫಲವನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಇಲ್ಲಿ ವಿವರಿಸಿದ್ದಾರೆ.

Published on: Nov 07, 2025 06:43 AM