Karnataka Assembly Polls: ಪ್ರಧಾನಿ ನರೇಂದ್ರ ಮೋದಿ ವಿಜಯಪುರ ಸಮಾವೇಶಕ್ಕೆ 2 ಲಕ್ಷ ಜನ, ಬಿಗಿ ಪೊಲೀಸ್ ಭದ್ರತೆ

|

Updated on: Apr 29, 2023 | 11:20 AM

ಪ್ರಧಾನಿಯವರ ಕಾರ್ಯಕ್ರಮಕ್ಕೆ ಭವ್ಯ ವೇದಿಕೆ ನಿರ್ಮಿಸಲಾಗಿದ್ದು ಸಮಾವೇಶದಲ್ಲಿ ಸುಮಾರು ಎರಡು ಲಕ್ಷ ಜನ ಭಾಗವಹಿಸುವ ನಿರೀಕ್ಷೆಯಿದೆ.

ವಿಜಯಪುರ: ಪ್ರಧಾನ ಮಂತ್ರಿ ನರೇಂದ್ರ ಮೋದಿಯರು (PM Narendra Modi) ಬೀದರ್ ಕಾರ್ಯಕ್ರಮದ ಬಳಿಕ ವಿಜಯಪುರ ತೆರಳಿ ನಗರದ ಹೊರವಲಯದಲ್ಲಿರುವ ಸೈನಿಕ ಶಾಲಾ (Sainik School) ಅವರಣದಲ್ಲಿ ಬೃಹತ್ ಸಮಾವೇಶದಲ್ಲಿ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯಲ್ಲಿ ಸ್ಪರ್ಧಿಸುತ್ತಿರುವ ಬಿಜೆಪಿ ಅಭ್ಯರ್ಥಿಗಳ (BJP candidates) ಪರ ಮತ ಯಾಚಿಸಲಿದ್ದಾರೆ. ಪ್ರಧಾನಿಯವರ ಕಾರ್ಯಕ್ರಮಕ್ಕೆ ಭವ್ಯ ವೇದಿಕೆ ನಿರ್ಮಿಸಲಾಗಿದ್ದು ಸಮಾವೇಶದಲ್ಲಿ ಸುಮಾರು ಎರಡು ಲಕ್ಷ ಜನ ಭಾಗವಹಿಸುವ ನಿರೀಕ್ಷೆಯಿದೆ. ವೇದಿಕೆಯ ಮುಂಭಾಗದಲ್ಲಿ 80,000 ಜನ ಕೂರಲು ಆಸನಗಳನ್ನು ವ್ಯವಸ್ಥೆ ಮಾಡಲಾಗಿದೆ. ಶಾಲಾ ಮೈದಾನದ ಹಲವೆಡೆ ಎಲ್ ಈ ಡಿ ಸ್ಕ್ರೀನ್ ಗಳನ್ನು ವ್ಯವಸ್ಥೆ ಮಾಡಲಾಗಿದೆ. ಭದ್ರತೆಗಾಗಿ 5 ಎಸ್ ಪಿ, 15 ಡಿವೈಎಸ್ ಪಿ, 28 ಸಿಪಿಐ, 69 ಪಿಎಸ್ ಐ, 52 ಎಸ್ ಐ, ನೂರಾರು ಪೊಲೀಸ್ ಸಿಬ್ಬಂದಿ 3 ಡಿಎಆರ್, 12 ಐಆರ್ ಬಿ ತುಕುಡಿಗಳ ಜೊತೆ 4 ಫೈರ್ ಎಂಜಿನ್ ಮತ್ತು 6 ಅಂಬ್ಯುಲೆನ್ಸ್ ಗಳನ್ನು ವ್ಯವಸ್ಥೆ ಮಾಡಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ