ಹಳಿಯಾಳದ ಹಾಸ್ಟೆಲೊಂದರಲ್ಲಿ ರಾತ್ರಿಯೂಟ ಸೇವಿಸಿದ ನಂತರ 30ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ, ಆಸ್ಪತ್ರೆಗೆ ದಾಖಲು
ಅಧಿಕಾರಿಗಳು ಹಾಸ್ಟೆಲ್ ಭೇಟಿ ನೀಡಿ ಮಕ್ಕಳು ಸೇವಿಸಿದ ಆಹಾರವನ್ನು ಪರೀಕ್ಷಿಸಿದರಲ್ಲದೆ ಆಸ್ಪತ್ರೆಗೂ ಹೋಗಿ ಮಕ್ಕಳ ಯೋಗಕ್ಷೇಮ ವಿಚಾರಿಸಿದರು.
ಉತ್ತರ ಕನ್ನಡ ಜಿಲ್ಲೆ (Karwar) ಹಳಿಯಾಳದಲ್ಲಿರುವ ಪರಿಶಿಷ್ಟ ವರ್ಗದ ಮೆಟ್ರಿಕ್-ಪೂರ್ವ ಬಾಲಕರ ಹಾಸ್ಟೆಲ್ ನಲ್ಲಿ (Hostel) ಕಳೆದ ರಾತ್ರಿ ನೀಡಿದ ಊಟದಲ್ಲಿ ಏನೋ ಏರುಪೇರಾಗಿದೆ. ಊಟದ ಬಳಿಕ 30 ಕ್ಕಿಂತ ಜಾಸ್ತಿ ಮಕ್ಕಳು ವಾಂತಿ-ಭೇದಿ ಮಾಡಿಕೊಂಡಿದ್ದರಿಂದ ಅವರೆಲ್ಲರನ್ನು ಹಳಿಯಾಳದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಧಿಕಾರಿಗಳು ಹಾಸ್ಟೆಲ್ ಭೇಟಿ ನೀಡಿ ಮಕ್ಕಳು ಸೇವಿಸಿದ ಆಹಾರವನ್ನು ಪರೀಕ್ಷಿಸಿದರಲ್ಲದೆ ಆಸ್ಪತ್ರೆಗೂ ಹೋಗಿ ಮಕ್ಕಳ ಯೋಗಕ್ಷೇಮ ವಿಚಾರಿಸಿದರು.