ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸಂಗ್ರಹಿಸಲಾಗುತ್ತಿರುವ ಟೋಲ್ ಶುಲ್ಕ ಎಷ್ಟು ಗೊತ್ತಾ? ಕೇಳಿಸಿಕೊಂಡರೆ ಗಾಬರಿಯಾಗುತ್ತೀರಿ!

|

Updated on: Mar 14, 2023 | 12:43 PM

ಒಬ್ಬ ಕ್ಯಾಬ್ ಡ್ರೈವರ್ ಕೇವಲ 20 ಕಿಮೀ ಸಂಚಾರಕ್ಕೆ ರೂ 140 ಎಲ್ಲಿಂದ ತರೋದು, ಅಷ್ಟು ದುಡ್ಡು ಕಟ್ಟಿದ ಬಳಿಕ ನಮಗೆ ಉಳಿಯೋದು ಏನು ಅಂತ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹೆದ್ದಾರಿಯ ಜೊತೆ ಸರ್ವಿಸ್ ರಸ್ತೆ ಸೌಲಭ್ಯ ಒದಗಿಸದಿರುವುದು ಸಮಸ್ಯೆಗಳ ಮೂಲವಾಗಿದೆ ಅಂತ ಅವರು ದೂರುತ್ತಿದ್ದಾರೆ.

ಬೆಂಗಳೂರು: ರವಿವಾರದಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಅವರೇನೋ ಅದ್ದೂರಿಯಾಗಿ ಬೆಂಗಳೂರು-ಮೈಸೂರು ಹತ್ತು ಪಥಗಳ ರಾಷ್ಟ್ರೀಯ ಹೆದ್ದಾರಿಯನ್ನು ಲೋಕಾರ್ಪಣೆ ಮಾಡಿದರು. ಹೆದ್ದಾರಿಯಲ್ಲಿ ಇಂದಿನಿಂದ ಟೋಲ್ ಶುಲ್ಕ ಸಂಗ್ರಹಣೆ ಶುರುವಾಗಿದ್ದು ವಾಹನ ಮಾಲೀಕರು ದರಗಳನ್ನು ಕಂಡು ಬೆಚ್ಚಿ, ಕಂಗಾಲಾಗುತ್ತಿದ್ದಾರೆ. ಭಾರಿ ವಾಹನಗಳಿಂದ (HMV) ರೂ 440, ಕಾರು, ಕ್ಯಾಬ್ ಗಳಿಂದ ರೂ 140 ರಿಂದ ರೂ, 275 ಟೋಲ್ ವಸೂಲಿ ಮಾಡಲಾಗುತ್ತಿದೆ. ವಾಹನಗಳ ಮಾಲೀಕರು, ಚಾಲಕರು ಅಕ್ಷರಶಃ ಹೌಹಾರಿದ್ದಾರೆ. ಒಬ್ಬ ಕ್ಯಾಬ್ ಡ್ರೈವರ್ (cabbie) ಕೇವಲ 20 ಕಿಮೀ ಸಂಚಾರಕ್ಕೆ ರೂ 140 ಎಲ್ಲಿಂದ ತರೋದು, ಅಷ್ಟು ದುಡ್ಡು ಕಟ್ಟಿದ ಬಳಿಕ ನಮಗೆ ಉಳಿಯೋದು ಏನು ಅಂತ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹೆದ್ದಾರಿಯ ಜೊತೆ ಸರ್ವಿಸ್ ರಸ್ತೆ ಸೌಲಭ್ಯ ಒದಗಿಸದಿರುವುದು ಸಮಸ್ಯೆಗಳ ಮೂಲವಾಗಿದೆ ಅಂತ ಅವರು ದೂರುತ್ತಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ