Heavy ‘toll’ on motorists: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಟೋಲ್ ಶುಲ್ಕ ದುಪ್ಪಟ್ಟು, ಆಕ್ರೋಶ ವ್ಯಕ್ತಪಡಿಸುತ್ತಿರುವ ವಾಹನ ಸವಾರರು
ಕೆಲವರು ತಮ್ಮ ಕಾರು, ವಾಹನಗಳಿಗೆ ಫಾಸ್ಟ್ಯಾಗ್ ಅಳವಡಿಸಿಕೊಂಡಾಗ್ಯೂ ಕಡಿಮೆ ಬ್ಯಾಲೆನ್ಸ್ ನೆಪ ಹೇಳಿ ದಂಡ ವಿಧಿಸಲಾಗುತ್ತಿದೆಯಂತೆ.
ಮಂಡ್ಯ: ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ (Bengaluru-Mysuru Expressway) ಮೂಲಕ ಪಯಣಿಸುವುದು ವಾಹನ ಸವಾರರ ಪಾಲಿಗೆ ದುಸ್ವಪ್ನವಾಗಿ (nightmare) ಪರಿಣಮಿಸುತ್ತಿದೆ. ರಾತ್ರೋರಾತ್ರಿ ಟೋಲ್ ಶುಲ್ಕವನ್ನು (toll fee) ಬರೋಬ್ಬರಿ ದುಪ್ಪಟ್ಟು ಮಾಡಲಾಗಿದೆ. ವಾರಾಂತ್ಯದ ರಜೆ ನಿಮಿತ್ತ ಕುಟುಂಗಳೊಂದಿಗೆ ಔಟಿಂಗ್, ಪಿಕ್ನಿಕ್, ಪ್ರವಾಸ ಅಂತ ಹೊರಟವರಿಗೆ ಟೋಲ್ ಶುಲ್ಕ ಕೇಳಿ ಆಘಾತವಾಗಿದೆ. ವಾಹನ ಸವಾರರು ತಮ್ಮ ಆಕ್ರೋಶವನ್ನು ಮಾಧ್ಯಮಗಳ ಎದುರು ಹೊರಹಾಕುತ್ತಿದ್ದಾರೆ. ನಿನ್ನೆಯವರೆಗೆ ಕಾರುಗಳಿಗೆ ರೂ. 155 ಟೋಲ್ ಶುಲ್ಕ ವಿಧಿಸಲಾಗುತಿತ್ತು. ಆದರೆ ಇವತ್ತು ಅದು ರೂ. 310 ಅಗಿದೆ. ಕೆಲವರು ತಮ್ಮ ಕಾರು, ವಾಹನಗಳಿಗೆ ಫಾಸ್ಟ್ಯಾಗ್ ಅಳವಡಿಸಿಕೊಂಡಾಗ್ಯೂ ಕಡಿಮೆ ಬ್ಯಾಲೆನ್ಸ್ ನೆಪ ಹೇಳಿ ದಂಡ ವಿಧಿಸಲಾಗುತ್ತಿದೆಯಂತೆ. ಸರ್ಕಾರಗಳು ಕ್ರಮ ಕೈಕೊಂಡು ವಾಹನ ಸವಾರರಿಗೆ ನೆರವಾಗಬೇಕು ಎಂದು ಜನ ಹೇಳುತ್ತಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos