200 ಮೆಗಾ ಪಿಕ್ಸೆಲ್ ಮೇನ್ ಕೆಮೆರಾ ಹೊಂದಿರುವ ಸ್ಮಾರ್ಟ್ ಪೋನ್ ಬೇಕಾ? ಸ್ವಲ್ಪ ತಾಳಿ, ಮೊಟೊರೊಲ ಅದನ್ನು ತರುತ್ತಿದೆ!

| Updated By: shivaprasad.hs

Updated on: Nov 27, 2021 | 9:04 AM

ಕೆಮೆರಾಗಳ ವಿಷಯನಲ್ಲೇ ಮೊಟೊರೊಲ ಒಂದು ಹೊಸ ದಾಖಲೆ ಬರೆಯಲು ಹೊರಟಿರೋದು. ಅದು 200 ಮೆಗಾ ಪಿಕ್ಸೆಲ್ ಕೆಮೆರಾ ಅಳವಡಿಸಿರುವ ಸ್ಮಾರ್ಟ್ ಪೋನ್ ಲಾಂಚ್ ಮಾಡಲು ಅದು ಸಿದ್ಧತೆ ಮಾಡಿಕೊಂಡಿದೆ.

ನಿಮಗೂ ಇದು ಗೊತ್ತಿರಬಹುದು. ವಿಶ್ವಕ್ಕೆ ಮೊಟ್ಟಮೊದಲ ಬಾರಿಗೆ ಮೊಬೈಲ್ ಫೋನನ್ನು ಪರಿಚಯಿಸಿದ್ದು ಮೊಟೊರೊಲ ಕಂಪನಿ. ಮೊದಲೆಲ್ಲ ವೈರ್ಲೆಸ್, ವಾಕೀ ಟಾಕೀಗಳನ್ನು ಮಾಡುತ್ತಿದ್ದ ಈ ಕಂಪನಿಯ ಇಂಜನೀಯರಗಳಲ್ಲಿ ಒಬ್ಬರಾಗಿದ್ದ ಮಾರ್ಟಿನ್ ಕೂಪರ್ 1973 ರಲ್ಲಿ ಮೊದಲ ಮೊಬೈಲ್ ಫೋನ್ ತಯಾರಿಸಿದ್ದರು. ಆದರೆ ಮೊಬೈಲ್ ಫೋನ್ಗಳ ಬಗ್ಗೆ ಜನರಿಗೆ ಗೊತ್ತಾಗಲಾರಂಭಿಸಿದ್ದು 90 ರ ದಶಕದಲ್ಲಿ. ಆಗ ಕೇವಲ 2-3 ಬ್ರ್ಯಾಂಡಿನ ಫೋನ್ಗಳು ಮಾತ್ರ ಲಭ್ಯವಿದ್ದವು ಮತ್ತು ಅವುಗಳಲ್ಲಿ ಮೊಟೊರೊಲ ಸಹ ಒಂದಾಗಿತ್ತು. ತೀವ್ರ ಪೈಪೋಟಿಯ ಈಗಿನ ಮೊಬೈಲ್ ಫೋನ್ಗಳ ಯುಗದಲ್ಲಿ ಬೇರೆ ಬೇರೆ ಕಂಪನಿಗಳು ಮೊಟೊರೊಲ ಸಂಸ್ಥೆಯನ್ನು ಹಿಂದಿಕ್ಕಿ ಮುಂದೆ ಸಾಗಿರುವುದು ನಿಜವಾದರೂ ಅದು ಕಣದಿಂದ ಯಾವತ್ತೂ ಹಿಂದೆ ಸರಿದಿಲ್ಲ.

ಮೊಟೊರೊಲ ಬಗ್ಗೆ ಯಾಕೆ ಮಾತಾಡಬೇಕಿದೆಯೆಂದರೆ, ಸಂಸ್ಥೆಯು ಈಗ ಒಂದು ಮೈಲಿಗಲ್ಲನ್ನು ಸ್ಥಾಪಿಸ ಹೊರಟಿದೆ. ನಿಮಗೆ ನೆನಪಿರಬಹುದು. ಮೊಟ್ಟ ಮೊದಲ ಬಾರಿಗೆ ಮೊಬೈಲ್ ಫೋನಲ್ಲಿ 2 ಮೆಗಾ ಪಿಕ್ಸೆಲ್ ಕೆಮೆರಾ ಬಂದಾಗ ನಾವು ಕುಣಿದಾಡಿದೆವು.

ನಂತರದ ದಿನಗಳಲ್ಲಿ ಅದು 4 ಮೆಗಾ ಪಿಕ್ಸೆಲ್ ಆದಾಗ ನಮ್ಮ ಖುಷಿ ಇಮ್ಮಡಿಗೊಂಡಿತು. ಹಾಗೆಯೇ, ಕೆಮೆರಾ ಸಾಮರ್ಥ್ಯ 8 ಮೆಗಾಪಿಕ್ಸೆಲ್ ತಲುಪಿದಾಗ ನಮ್ಮ ಸಂತೋಷಕ್ಕೆ ಪಾರವೇ ಇರಲಿಲ್ಲ. ಅದು ಹೆಚ್ಚಿದಂತೆಲ್ಲ, ಮತ್ತು ಫೋನಲ್ಲಿ ಕೆಮೆರಾಗಳ ಸಂಖ್ಯೆ ಜಾಸ್ತಿಯಾದಂತೆಲ್ಲ ನಮ್ಮ ಖುಷಿಯೂ ಹೆಚ್ಚಾಗುತ್ತಾ ಹೋಯಿತು. ನಿಮಗೆ ಗೊತ್ತಿದೆ, ಈಗ ಕೆಲ ಸ್ಮಾರ್ಟ್ ಫೋನ್ಗಳಲ್ಲಿ 108 ಮೆಗಾ ಪಿಕ್ಸೆಲ್ ಮೇನ್ ಕೆಮೆರಾ ಇದೆ!

ಕೆಮೆರಾಗಳ ವಿಷಯನಲ್ಲೇ ಮೊಟೊರೊಲ ಒಂದು ಹೊಸ ದಾಖಲೆ ಬರೆಯಲು ಹೊರಟಿರೋದು. ಹೌದು, ಅದು 200 ಮೆಗಾ ಪಿಕ್ಸೆಲ್ ಕೆಮೆರಾ ಅಳವಡಿಸಿರುವ ಸ್ಮಾರ್ಟ್ ಪೋನ್ ಲಾಂಚ್ ಮಾಡಲು ಅದು ಸಿದ್ಧತೆ ಮಾಡಿಕೊಂಡಿದೆ.

ಇದೇ ವರ್ಷ ಸೆಪ್ಟೆಂಬರ್ ನಲ್ಲಿ ಸ್ಯಾಮ್ಸಂಗ್ 200 ಮೆಗಾಪಿಕ್ಸೆಲ್ ಐಸೊಸೆಲ್ ಕೆಮೆರಾ ಸೆನ್ಸಾರ್ ಲಾಂಚ್ ಮಾಡಿತ್ತಾದರೂ ಸ್ಮಾರ್ಟ್ ಫೋನಲ್ಲಿ ಅಳವಡಿಸಿರಲಿಲ್ಲ. ಅದರೆ ಮೊಟೊರೊಲ 200 ಮೆಗಾ ಪಿಕ್ಸಲ್ ಕೆಮೆರಾವನ್ನು ಮೊಟೊ ಜಿ 5ಜಿ ಸ್ಮಾರ್ಟ್ ಪೋನಲ್ಲಿ ಅಳವಡಿಸಲಿದೆ.

ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ 200 ಎಮ್ ಪಿ ಕೆಮೆರಾವನ್ನು ಮುಂದಿನ ವರ್ಷ ಲಾಂಚ್ ಮಾಡುವುದಾಗಿ ಮೊಟೊರೊಲ ಸಂಸ್ಥೆ ಹೇಳಿದೆ. ಯಾವ ತಿಂಗಳು, ದಿನಾಂಕ ಅಂತ ಬಹಿರಂಗಪಡಿಸಿಲ್ಲ.

ಅಂದಹಾಗೆ, ಶಾಮಿ ಸಹ 200 ಎಮ್ ಪಿ ಕೆಮೆರಾ ಒಳಗೊಂಡ ಸ್ಮಾರ್ಟ್ಫೋನ್ ಲಾಂಚ್ ಮಾಡಲು ನಿರ್ಧರಿಸಿದ್ದು ಅದು 2023 ರಲ್ಲಿ ಮಾರ್ಕೆಟ್ ಗೆ ಬರಲಿದೆ.

ಇದನ್ನೂ ಓದಿ:   ಪೈಪ್ ಮಾಸ್ಟರ್‌ ಶಾಂತಗೌಡ ಬಿರಾದರ್​ನ 14 ಎಕರೆ ಫಾರ್ಮ್​ಹೌಸ್​ ಹೇಗಿದೆ ಗೊತ್ತಾ? ವಿಡಿಯೋ ನೋಡಿ