Ramanagara: ದಿಶಾ ಸಭೆಯಲ್ಲಿ ನಗರಸಭೆ ಆಯುಕ್ತರನ್ನು ನೀವು ಕ್ಲರ್ಕಾ, ಪಿಯೋನ್ನಾ ಅಂತ ಕೇಳಿದ ಸಂಸದ ಡಿಕೆ ಸುರೇಶ್!
ಕಚೇರಿಯಲ್ಲಿ ಯಾವ ರೀತಿ ಕೆಲಸ ಮಾಡುತ್ತೀರಿ ಅನ್ನೋದು ನಿಮ್ ಮುಖ ನೋಡಿದ್ರೆ ಗೊತ್ತಾಗುತ್ತದೆ ಎಂದು ಸುರೇಶ್ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ.
ರಾಮನಗರ: ರಾಮನಗರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸಂಸದ ಡಿಕೆ ಸುರೇಶ್ (DK Suresh) ಇಂದು ದಿಶಾ ಸಭೆ ನಡೆಸಿದರು. ಸಭೆಯಲ್ಲಿ ಭಾಗವಹಿಸಿದ್ದ ರಾಮನಗರ ನಗರಸಭೆ ಆಯಕ್ತ (corporation commissioner) ನಾಗೇಶ್ ಯಾವುದೇ ಪೂರ್ವ ಸಿದ್ಧತೆಯಿಲ್ಲದೆ (unprepared) ಸಭೆಯಲ್ಲಿ ಭಾಗವಹಿಸಿದ್ದಕ್ಕೆ ತೀವ್ರ ಮುಖಭಂಗ ಅನುಭವಿಸಬೇಕಾಯಿತು. ಕಾಮಗಾರಿಗಳ ಬಗ್ಗೆ ಸಂಸದ ವಿವರಣೆ ಕೇಳಿದಾಗ ನಾಗೇಶ್ ತಡವರಿಸಿದರು. ಅಸಲಿಗೆ ಅವರಲ್ಲಿ ಸರಿಯಾದ ಮಾಹಿತಿಯೇ ಇರಲಿಲ್ಲ. ಆಗಲೇ ಅವರು ನಾಗೇಶ್ ಗೆ ನೀವು ಕಚೇರಿಯಲ್ಲಿ ಕ್ಲರ್ಕಾ ಆಥವಾ ಪಿಯೋನ್ನಾಅಂತ ಕೇಳುತ್ತಾರೆ. ನಾಗೇಶ್ ಅಲ್ಲ ಸಾರ್ ಕಮೀಶನರ್ ಅಂದಾಗ; ಸುರೇಶ್, ಕಮೀಶನರ್ ಕಾಣೋದೇ ಇಲ್ವಲ್ಲಾ ಅನ್ನುತ್ತಾರೆ. ಕಚೇರಿಯಲ್ಲಿ ಯಾವ ರೀತಿ ಕೆಲಸ ಮಾಡುತ್ತೀರಿ ಅನ್ನೋದು ನಿಮ್ ಮುಖ ನೋಡಿದ್ರೆ ಗೊತ್ತಾಗುತ್ತದೆ ಎಂದು ಸುರೇಶ್ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ