Anna Bhagya scheme: ಯೋಜನೆ ಜಾರಿಗೊಳಿಸಲು ಭಾರೀ ಪ್ರಮಾಣದಲ್ಲಿ ಅಕ್ಕಿ ಬೇಕು, ಆದರೆ ಸಿದ್ದರಾಮಯ್ಯ ಸರ್ಕಾರ ಧೃತಿಗೆಟ್ಟಿಲ್ಲ
ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರತಿ ಕುಟುಂಬಕ್ಕೆ 5 ಕೆಜಿಯಂತೆ ಅಕ್ಕಿ ವಿತರಿಸಲು 53,000 ಕ್ವಿಂಟಲ್ ಅಕ್ಕಿ ಬೇಕಾಗುತ್ತದೆ.
ಕಾರವಾರ: ಬಿಪಿಎಲ್ ಕಾರ್ಡುದಾರರಿಗೆ ಪ್ರತಿ ತಿಂಗಳು ಹತ್ತತ್ತು ಕೆಜಿ ಅಕ್ಕಿ ವಿತರಿಸಲು ಭಾರೀ ಪ್ರಮಾಣದಲ್ಲಿ ದಾಸ್ತಾನು ಹೊಂದಿರಬೇಕಾಗುತ್ತದೆ. ಉತ್ತರ ಕನ್ನಡ ಜಿಲ್ಲೆಯ ಸ್ಥಿತಿಯನ್ನೊಮ್ಮೆ ನೋಡಿ. 4.5 ಲಕ್ಷ ಬಿಪಿಎಲ್ ಕಾರ್ಡುದಾರರನ್ನು (BLP cardholders) ಹೊಂದಿರುವ ಚಿಕ್ಕ ಜಿಲ್ಲೆ ಇದು. ನಿಮಗಿಲ್ಲಿ ಕಾಣುತ್ತಿರೋದು ಜಿಲ್ಲಾ ಉಗ್ರಾಣ (warehouse) ಮತ್ತು ಇಲ್ಲಿ ಕೇವಲ 3.5 ಸಾವಿರ ಕ್ವಿಂಟಲ್ ಅಕ್ಕಿ ದಾಸ್ತಾನು (stocks) ಮಾತ್ರ ಇದೆ. ಪ್ರತಿ ಕುಟುಂಬಕ್ಕೆ 5 ಕೆಜಿಯಂತೆ ಅಕ್ಕಿ ವಿತರಿಸಲು ಜಿಲ್ಲೆಗೆ 53,000 ಕ್ವಿಂಟಲ್ ಅಕ್ಕಿ ಬೇಕಾಗುತ್ತದೆ. ಇನ್ನು 10 ಕೆಜಿಯಂತೆ ವಿತರಿಸಬೇಕಾದರೆ 1.06 ಲಕ್ಷ ಕ್ವಿಂಟಲ್ ಅಕ್ಕಿ ಬೇಕಾಗುತ್ತದೆ. ಜಿಲ್ಲೆಯಲ್ಲಿ ಒಟ್ಟು 13 ಉಗ್ರಾಣಗಳಿವೆ. ಕಾರವಾರದಲ್ಲಿ ಈ ಗೋದಾಮಿನ ಜೊತೆ ಇನ್ನೊಂದು ಗೋದಾಮಿದೆ. ಜಿಲ್ಲೆಯ ಉಳಿದ 9 ಗೋದಾಮುಗಳಿಗೆ ಈ ಎರಡು ಉಗ್ರಾಣಗಳಿಂದಲೇ ಅಕ್ಕಿ ಸರಬರಾಜು ಆಗುತ್ತದೆ. ಉತ್ತರ ಕನ್ನಡದಂಥ ಚಿಕ್ಕ ಜಿಲ್ಲೆಯಲ್ಲಿ ವಸ್ತು ಸ್ಥಿತಿ ಹೀಗಿದೆ, ದೊಡ್ಡ ದೊಡ್ಡ ಜಿಲ್ಲೆಗಳಿಗೆ ಬೇಕಾಗುವ ಅಕ್ಕಿಯ ಪ್ರಮಾಣ ನೆನೆದರೆ ದಿಕ್ಕು ತೋಚದಂತಾಗುತ್ತದೆ. ಆದರೆ ಸಿದ್ದರಾಮಯ್ಯ ಸರ್ಕಾರ ಶತಾಯ ಗತಾಯ ಯೋಜನೆ ಜಾರಿಗೆ ತರುವುದಾಗಿ ಹೇಳುತ್ತಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ