Brand Bengaluru Meeting: ನಗರದ ಗಣ್ಯರೊಂದಿಗೆ ಸೂಟುಧಾರಿಯಾಗಿ ಮಿಂಚಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್!

Brand Bengaluru Meeting: ನಗರದ ಗಣ್ಯರೊಂದಿಗೆ ಸೂಟುಧಾರಿಯಾಗಿ ಮಿಂಚಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್!

ಅರುಣ್​ ಕುಮಾರ್​ ಬೆಳ್ಳಿ
|

Updated on: Jun 17, 2023 | 5:44 PM

ಹಲವಾರು ಉದ್ಯಮಿಗಳು, ಅಧಿಕಾರಿಗಳು, ಗಣ್ಯರು, ಜನಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡರು.

ಬೆಂಗಳೂರು: ‘ಬ್ರ್ಯಾಂಡ್ ಬೆಂಗಳೂರು’ (Brand Bengaluru) ಪುನರ್ ಸ್ಥಾಪಿಸಲು ಕೈಗೆತ್ತಿಕೊಳ್ಳಬೇಕಾದ ಮತ್ತು ಕಾರ್ಯರೂಪಕ್ಕೆ ತರಬೇಕಿರುವ ಅಂಶಗಳನ್ನು ನಗರದ ಉದ್ಯಮಿಗಳು (industrialists), ಗಣ್ಯರು, ಅಧಿಕಾರಿಗಳು ಮತ್ತು ಜನ ಪ್ರತಿನಿಧಿಗಳೊಂದಿಗೆ ಚರ್ಚಿಸಲು ವಿಧಾನ ಸೌಧದಲ್ಲಿ ಅಯೋಜಿಸಿದ ಸಭೆಯಲ್ಲಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಸೂಟು ಬೂಟಲ್ಲಿ ಮಿಂಚಿದರು. ನಗರದ ಪ್ರತಿಷ್ಠಿತ ಉದ್ಯಮಿಗಳಾಗಿರುವ ಕಿರಣ್ ಮುಜುಂದಾರ್, ಗೀತಾಂಜಲಿ ಕಿರ್ಲೋಸ್ಕರ್ ಮೊದಲಾದವರೊಂದಿಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಸಿಎಸ್ ವಂದಿತಾ, ನಗರ ಪೊಲೀಸ್ ಕಮೀಶನರ್ ಬಿ ದಯಾನಂದ, ಸಂಚಾರಿ ಪೊಲೀಸ್ ಜಂಟಿ ಆಯುಕ್ತ ಎಂಎನ್ ಅನುಚೇತ್ ಸಂಸದ ಡಿವಿ ಸದಾನಂದ ಗೌಡ, ಸಚಿವರಾದ ಕೃಷ್ಣ ಬೈರೇಗೌಡ, ಬೈರತಿ ಸುರೇಶ್, ಮಾಜಿ ಕ್ರಿಕೆಟರ್ ಬ್ರಿಜೇಶ್ ಪಟೇಲ್, ಪ್ರೊಫೆಸರ್ ರಾಜೀವ್ ಗೌಡ ಮೊದಲಾದವರು ಭಾಗವಹಿಸಿದ್ದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ